ಹೆಲೆನ್: ಮಲಯಾಳಂ ಸಿನಿಮಾ ಹೆಲೆನ್ ಕೇವಲ ಒಂದು ದಿನದಲ್ಲಿ ನಡೆವ ಕತೆ. ಸಿನಿಮಾದ ನಾಯಕಿ ಕೋಲ್ಡ್ ಸ್ಟೋರೆಜ್ ಒಂದರಲ್ಲಿ ಸಿಲುಕಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ಹೊರಗೆ ಬರುವ ಕತೆಯನ್ನು ಸಿನಿಮಾ ಹೊಂದಿದೆ. ಮೂಲ ಸಿನಿಮಾದಲ್ಲಿ ಅನ್ನಾ ಬೆನ್ ಅದ್ಭುತವಾಗಿ ನಟಿಸಿದ್ದರು. ಹಿಂದಿಯಲ್ಲಿ ಈ ಸಿನಿಮಾ ರೀಮೇಕ್ ಅಗುತ್ತಿದ್ದು, ಸಿನಿಮಾದಲ್ಲಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ.
ಯೂ ಟರ್ನ್: ಕನ್ನಡದಲ್ಲಿ ಲೂಸಿಯಾ ಪವನ್ ನಿರ್ದೇಶಿಸಿ ಶ್ರದ್ಧಾ ಶ್ರೀನಾಥ್ ನಟಿಸಿದ್ದ ಲೂಸಿಯಾ ಸಿನಿಮಾ ಕನ್ನಡದಲ್ಲಿ ಸಾಕಷ್ಟು ಸದ್ದು ಮಾಡಿತ್ತು.. ಅಲ್ಲದೆ ಈ ಸಿನಿಮಾ ಬೆಂಗಾಲಿಯಲ್ಲಿ 'ಫ್ಲೈ ಓವರ್' ಹೆಸರಿನಲ್ಲಿ ಶ್ರೀಲಂಕನ್ ಭಾಷೆಯಲ್ಲಿ 'ಯೂ ಟರ್ನ್' ಎಂದು, ಫಿಲಿಫಿನೊ ಭಾಷೆಯಲ್ಲಿ 'ಯೂ ಟರ್ನ್' ಎಂದು ರೀಮೇಕ್ ಆಗಿದೆ. ಸದ್ಯ ಬಾಲಿವುಡ್ಗೆ ಈ ಸಿನಿಮಾ ರಿಮೇಕ್ ಆಗುತ್ತಿದ್ದು, ಎಕ್ತ ಕಪೂರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.