PHOTOS: ಮಥುರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಟ್ರ್ಯಾಕ್ಟರ್ ಓಡಿಸಿದ ಹೇಮಾ ಮಾಲಿನಿ..!
ನಟಿ ಹೇಮಾ ಮಾಲಿನಿ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ ವಿಷಯ ತಿಳಿದೇ ಇದೆ. ಇತ್ತೀಚೆಗಷ್ಟೆ ಅವರು ಮಥುರಾದ ಗೋರ್ವಧನ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಕೃಷಿಕರೊಬ್ಬರ ಭೂಮಿಯಲ್ಲಿ ಟ್ರ್ಯಾಕ್ಟರ್ ಓಡಿಸಿ ಸುದ್ದಿಯಾಗಿದ್ದಾರೆ. ಅಲ್ಲದೆ ಈ ಹಿಂದೆ ಅವರು ರೈತರೊಂದಿಗೆ ಸೇರಿ ಒಣಗಿದ ಪೈರು ಸಹ ಕತ್ತರಿಸಿದ್ದರು. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.