ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಮಗಳ ಜೊತೆಗಿನ ಫೋಟೋ, ವಿಡಿಯೋ ಶೇರ್ ಮಾಡಿದ್ದಾರೆ. ಮುದ್ದು ಮಗಳ ಜೊತೆ ದಂಪತಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ನಟಿ ಬಿಪಾಶಾ ಮಗುವಿನ ಫೋಟೋ ಜೊತೆಗೆ ನನ್ನ ಜೀವನದ ಅತ್ಯಂತ ಸಂತೋಷದ ವಿಷಯ ಎಂದ್ರೆ ಮಗಳು ದೇವಿಗೆ (Devi) ತಾಯಿಯಾಗಿದ್ದು ಎಂದು ಬರೆದುಕೊಂಡಿದ್ದಾರೆ. ಬಿಪಾಶಾ ಬಸು ಮಗಳು ದೇವಿಯ ಕ್ಯೂಟ್ ಹೇರ್ ಬ್ಯಾಂಡ್ ಧರಿಸಿದ್ದು, ಬಿಪಾಶಾ ಬಸು ತನ್ನ ಮಗುವಿನ ಪಾದಗಳಿಗೆ ಮುತ್ತಿಟ್ಟಿದ್ದಾರೆ. ಬಿಪಾಶಾ ಮಗಳಿಗೆ ದೇವಿ ಎಂದು ಹೆಸರಿಡಲಾಗಿದ್ದು, ಮುದ್ದಾದ ಪೋಸ್ಟ್ ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಟ ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ದಂಪತಿ ಮುದ್ದು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಬಿಪಾಶಾ ಬಸು ತಮ್ಮ ಮಗಳು ದೇವಿಯೊಂದಿಗೆ ತಮ್ಮ ಪತಿ ಕೂಡ ನಿದ್ದೆ ಮಾಡುತ್ತಿರುವ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. (ಚಿತ್ರ: Instagram) ಬಿಪಾಶಾ ಬಸು ತನ್ನ ಕುಟುಂಬದೊಂದಿಗೆ ಆನಂದದಿಂದ ಕಾಲ ಕಳೆಯುತ್ತಿದ್ದಾರೆ. ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ಹೆಸರಿಟ್ಟಿದ್ದಾರೆ. (ಚಿತ್ರ: Instagram)