Rupesh Shetty-Koragajja: ಬಿಗ್ ಬಾಸ್ ಗೆಲುವಿನ ಹಿಂದಿದೆಯಾ ಕೊರಗಜ್ಜನ ಕೃಪೆ? ದೈವದ ಮಹಿಮೆ ತೆರೆದಿಟ್ಟ ರೂಪೇಶ್ ಶೆಟ್ಟಿ!
"ಮಂಗಳೂರಿಗೆ ಬಂದಾಗ ಮೊದಲು ಹೋಗುವುದು ಕುತ್ತಾರಿ ಎಂಬ ಪ್ರದೇಶಕ್ಕೆ. ಸೋ ಅವರು ಗೆಲ್ಲಿಸಿದ್ದಾರೆ, ಕೊರಗಜ್ಜ ಕಾಪಾಡಿದ್ದಾರೆ. ನಾನು ಅದಕ್ಕೆ ಬಿಗ್ ಬಾಸ್ ಗೆದ್ದೇ" ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 09 ಯಶಸ್ವಿಯಾಗಿ ಮುಗಿದಿದೆ. ಬಿಗ್ ಬಾಸ್ ಸೀಸನ್ 09ರ ವಿನ್ನರ್ ಆಗಿದ್ದಾರೆ ರೂಪೇಶ್ ಶೆಟ್ಟಿ. ಸದ್ಯ ಎಲ್ಲೆಡೆ ರೂಪೇಶ್ ಶೆಟ್ಟಿ ಅವರದ್ದೇ ಸದ್ದು.
2/ 8
ರೂಪೇಶ್ ಶೆಟ್ಟಿ ಅವರಿಗೆ ಸಿನಿಮಾಗಳ ಮೇಲೆ ಸಿನಿಮಾ ಆಫರ್ ಬರುತ್ತಿವೆಯಂತೆ. ಬಿಗ್ ಬಾಸ್ ಮುಗಿದು ಒಂದು ವಾರ ಆಗಿದೆ. ಆದ್ರೂ ರೂಪೇಶ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ದೊಡ್ಡ ದೊಡ್ಡ ನಿರ್ದೇಶಕರೇ ಕಾಲ್ ಮಾಡುತ್ತಿದ್ದಾರಂತೆ.
3/ 8
ಕೊರಗಜ್ಜನ ಆರಾಧನೆಯಿಂದ ಬಿಗ್ ಬಾಸ್ ಗೆದ್ದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಸದಾ ನಾನು ಟಾಸ್ಕ್ ಆಡುವಾಗ ಕೊರಗಜ್ಜನನ್ನು ನೆನೆಯುತ್ತಿದ್ದೆ ಎಂದು ರೂಪೇಶ್ ಹೇಳಿದ್ದಾರೆ.
4/ 8
ಬಿಗ್ ಬಾಸ್ ಮನೆಯಲ್ಲಿ ಕೊರಗಜ್ಜ ಫುಲ್ ಫೇಮಸ್. ನಾನು ಅಂದುಕೊಂಡಿದ್ದೆ, ಗೆಲ್ಲುವುದು ಬೇಡ. ಕೊನೆ ಪಕ್ಷ ಟಾಪ್ 5 ನಲ್ಲಿ ಆದ್ರೂ ಬರಬೇಕು ಎಂದುಕೊಂಡಿದ್ದೆ ಎಂದು ರೂಪೇಶ್ ಶೆಟ್ಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
5/ 8
ಮಂಗಳೂರಿಗೆ ಬಂದಾಗ ಮೊದಲು ಹೋಗುವುದು ಕುತ್ತಾರಿ ಎಂಬ ಪ್ರದೇಶಕ್ಕೆ. ಸೋ ಅವರು ಗೆಲ್ಲಿಸಿದ್ದಾರೆ ಕೊರಗಜ್ಜ ಕಾಪಾಡಿದ್ದಾರೆ. ನಾನು ಅದಕ್ಕೆ ಬಿಗ್ ಬಾಸ್ ಗೆದ್ದೇ ಎಂದು ಹೇಳಿದ್ದಾರೆ.
6/ 8
ನಾಲ್ಕು, ಐದು ಕನ್ನಡ ಸಿನಿಮಾ ಆಫರ್ ಬಂದಿವೆ. ಅವುಗಳನ್ನು ನೋಡಿ ಒಂದನ್ನು ಅಂತಿಮ ಮಾಡ್ತೀನಿ. ಹೊಸಬರು ಆದ್ರೂ ಸರಿ, ಅನುಭವಿ ನಿರ್ದೇಶಕರಾದ್ರೂ ಸರಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
7/ 8
ಹುಲಿವೇಷ ಅಂದ್ರೆ ನನಗೆ ತುಂಬಾ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ಹುಲಿವೇಷಕ್ಕೆ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಯ್ತು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
8/ 8
ಬಿಗ್ ಬಾಸ್ ವಿನ್ನರ್ ಆಗಿರುವುದು ತುಂಬಾ ಖುಷಿ ಆಗಿದೆ. ಅದರಿಂದ ಜನರ ಪ್ರೀತಿ ಸಿಕ್ಕಿದೆ. ಜನರ ಪ್ರೀತಿಯನ್ನು ಒಳ್ಳೆ ಸಿನಿಮಾ ಮಾಡಿ ಉಳಿಸಿಕೊಳ್ತೇನೆ ಎಂದಿದ್ದಾರೆ ರೂಪೇಶ್ ಶೆಟ್ಟಿ.