ಬಿಗ್ ಬಾಸ್ ಸೀಸನ್ 09 ಯಶಸ್ವಿಯಾಗಿ ಮುಗಿದಿದೆ. ಬಿಗ್ ಬಾಸ್ ಸೀಸನ್ 09ರ ವಿನ್ನರ್ ಆಗಿದ್ದಾರೆ ರೂಪೇಶ್ ಶೆಟ್ಟಿ. ಸದ್ಯ ಎಲ್ಲೆಡೆ ರೂಪೇಶ್ ಶೆಟ್ಟಿ ಅವರದ್ದೇ ಸದ್ದು.
2/ 8
ರೂಪೇಶ್ ಶೆಟ್ಟಿ ಅವರು ಆ ಸಿನಿಮಾ ಮಾಡ್ತಾರಂತೆ. ರೂಪೇಶ್ ಶೆಟ್ಟಿ ಆ ಸಿನಿಮಾ ಹೀರೋ ಅಂತೆ ಅಂತ ಎಲ್ಲಾ ಕಡೆ ಸುದ್ದಿ ಹಬ್ಬುತ್ತಿದೆ. ಆದ್ರೆ ಅವರಿಗೆ ಯಾರ ಜೊತೆ ಸಿನಿಮಾ ಮಾಡಲು ಇಷ್ಟ ಅಂತ ನೋಡಿ.
3/ 8
3 ಸ್ಯಾಂಡಲ್ವುಡ್ ನಲ್ಲಿ 'R' ಲೆಟರ್ ಹೆಸರಿರುವವರದ್ದೇ ಅಬ್ಬರ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರದ್ದೇ. ಅವರ ಜೊತೆ ನನ್ನನ್ನು ಮತ್ತೊಂದು 'R' ಸ್ಯಾಂಡಲ್ವುಡ್ಗೆ ಎಂಟ್ರಿ ಅಂತಿದ್ದಾರೆ. ಅದು ನನಗೆ ಖುಷಿ ಕೊಟ್ಟಿದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
4/ 8
ನನಗೆ ಜವಾಬ್ದಾರಿ ಇದೆ. ದುಡ್ಡು ಸಿಗುತ್ತೆ ಅಂತ ಸಿನಿಮಾ ಮಾಡಲ್ಲ. ನನಗೆ ತುಂಬಾ ಕಡೆಯಿಂದ ಕಾಲ್ ಬಂದಿದೆ. ಅನುಭವ ಇರುವ ನಿರ್ದೇಶಕರೇ ಕರೆ ಮಾಡಿದ್ದಾರೆ. ಒಳ್ಳೆ ಸಿನಿಮಾ ಮಾಡ್ತೀನಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
5/ 8
ನಾನು ವ್ಯಕ್ತಿತ್ವದಿಂದ ಪ್ರೀತಿ ಗಳಿಸಿದ್ದೇನೆ. ಒಳ್ಳೆ ಸಿನಿಮಾ ಮಾಡಿ ಆ ಪ್ರೀತಿಯನ್ನು ಉಳಿಸಿಕೊಳ್ತೇನೆ. ಜನರ ಪ್ರೀತಿ ಗಳಿಸುವುದು ತುಂಬಾ ಕಷ್ಟ. ಗಳಿಸಿದ ಮೇಲೆ ಅದನ್ನು ಉಳಿಸಿಕೊಂಡು ಹೋಗಬೇಕು. ಒಳ್ಳೆ ಸಿನಿಮಾ ಮಾಡಲು ರೆಡಿ ಆಗಿದ್ದಾರೆ ರೂಪೇಶ್ ಶೆಟ್ಟಿ.
6/ 8
ನನಗೆ ರಿಷಬ್ ಶೆಟ್ಟಿ ಅಂದ್ರೆ ತುಂಬಾ ಇಷ್ಟ. ಈಗ ಅಲ್ಲ ಮೊದಲಿನಿಂದ. ನನ್ನ ತುಳು ಸಿನಿಮಾ ಗಿರ್ ಗಿಟ್ ಗೆ ರಿಷಬ್ ಶೆಟ್ಟಿ ಸರ್ ತುಂಬಾ ಸಹಾಯ ಮಾಡಿದ್ರು. ನನಗೆ ಅವರ ಜೊತೆ ಸಿನಿಮಾ ಮಾಡಲು ಇಷ್ಟ ಎಂದು ರೂಪೇಶ್ ಹೇಳಿದ್ದಾರೆ.
7/ 8
ರಿಷಬ್ ಶೆಟ್ಟಿ ಅವರು ನಟ ಅನ್ನೋದಕ್ಕಿಂತ ಹೆಚ್ಚು ನನಗೆ ನಿರ್ದೇಶಕರಾಗಿ ಇಷ್ಟ. ಅವರ ಜೊತೆ ಸಿನಿಮಾ ಮಾಡಲು ಇಷ್ಟ. ರಕ್ಷಿತ್ ಶೆಟ್ಟಿ ಸರ್ ಜೊತೆ ಸಿಕ್ಕರೂ, ಅದು ನನ್ನ ಭಾಗ್ಯ ಎಂದಿದ್ದಾರೆ ರೂಪೇಶ್ ಶೆಟ್ಟಿ.
8/ 8
ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮೂವರಲ್ಲಿ ಯಾರ ಜೊತೆ ಸಿನಿಮಾ ಮಾಡಲು ಅವಕಾಶ ಸಿಕ್ಕರೂ ತುಂಬಾ ಖುಷಿ ಎಂದು ರೂಪೇಶ್ ಶೆಟ್ಟಿ ಅವರು ಹೇಳಿದ್ದಾರೆ.