ಕಮಲಿ ಸೀರಿಯಲ್ ಮೂಲಕ ಜನಪ್ರಿಯರಾಗಿದ್ದ ನಟಿ ಅಮೂಲ್ಯ ಗೌಡ (Amulya Gowda), ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss) ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮೂಲಕ ಅಮೂಲ್ಯ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಹಾಗೂ ಅಮೂಲ್ಯ ಸ್ನೇಹದ ಬಗ್ಗೆ ಕೂಡ ಗುಸುಗುಸು ಶುರುವಾಗಿತ್ತು. ಬಿಗ್ ಬಾಸ್ ಸೀಸನ್ 9ರ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಹೊರಬಂದಿದ್ದಾರೆ. ಡಬಲ್ ಎಲಿಮಿನೇಷನ್ ಇರಲಿದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಅನೇಕ ಟಾಸ್ಕ್ಗಳನ್ನು ಅಮೂಲ್ಯ ಚೆನ್ನಾಗಿಯೇ ಆಡಿದ್ದಾರೆ. ಅಡುಗೆ, ಮನರಂಜನೆ ನೀಡುವುದಲ್ಲೂ ಅಮೂಲ್ಯ ಮುಂದಿದ್ದರು. ಫಿನಾಲೆಗೆ ಕಡೆಯ ಘಟ್ಟದಲ್ಲಿ ಇರುವ ಈ ವಾರಾಂತ್ಯ ಇಬ್ಬರು ಸ್ಪರ್ಧಿಗಳು ಹೊರಬರಲಿದ್ದಾರೆ. ಅದರಲ್ಲಿ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಗೌಡ ಔಟ್ ಆಗಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ. ಡಿಸೆಂಬರ್ 31 ಹಾಗೂ ಜನವರಿ 01ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅರುಣ್ ಸಾಗರ್, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.