ಅರುಣ್ ಸಾಗರ್ ಫಿನಾಲೆ ಬರ್ತಾರೆ ಎಂದು ಬಹುತೇಕರು ಊಹೆ ಮಾಡಿದ್ರು ಆದ್ರೆ ಎಲ್ಲಾ ತಲೆಕೆಳಗಾಗಿದೆ. ಬಿಗ್ ಬಾಸ್ ಮನೆಯಿಂದ ಅರುಣ್ ಸಾಗರ್ ಹೊರ ಹೋಗಿದ್ದಾರೆ. 92 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅರುಣ್ ಸಾಗರ್ ಕೂಲ್ ಆಗಿಯೇ ಆಟವಾಡಿಕೊಂಡು ಬಂದಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದು ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿದ್ರು. ಜೊತೆಗೆ ಬಿಗ್ ಬಾಸ್ ನೀಡಿದ ಎಲ್ಲಾ ಟಾಸ್ಕ್ ಗಳು ಉತ್ತಮ ರೀತಿಯಲ್ಲೇ ನಿರ್ವಹಿಸಿಕೊಂಡು ಬಂದಿದ್ರು. ಸಿನಿಮಾಗಳ ಮೂಲಕ ಅರುಣ್ ಸಾಗರ ಪರ್ವ, ಚಂದು, ಜಸ್ಟ್ ಮಾತ್ ಮಾತಲ್ಲಿ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅರುಣ್ ಸಾಗರ್ ನಟಿಸಿದ್ದಾರೆ. ಅರುಣ್ ಸಾಗರ್ ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಸೀಸನ್ 9ರ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಹೊರಬಂದಿದ್ದಾರೆ. ಡಬಲ್ ಎಲಿಮಿನೇಷನ್ ನಡೆದಿದೆ. ಈ ತಿಂಗಳ ಅಂತ್ಯಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ. ಡಿಸೆಂಬರ್ 31 ಹಾಗೂ ಜನವರಿ 01ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅರುಣ್ ಸಾಗರ್, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.