Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

ಬಿಗ್ ಬಾಸ್ ಸೀಸನ್ 8 ವಿನ್ನರ್ ಮಂಜು ಪಾವಗಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂತರಪಟ ಧಾರಾವಾಹಿಯಲ್ಲಿ ಅಪ್ಪನ ಪಾತ್ರ ಮಾಡ್ತಾ ಇದ್ದಾರೆ.

First published:

  • 18

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಮಜಾ ಭಾರತದ ಮೂಲಕ ಮಂಜು ಪಾವಗಡ ಅವರು ಖ್ಯಾತಿ ಹೊಂದಿದ್ದಾರೆ. ಅವರು ಮಾಡುವ ಕಾಮಿಡಿ, ಡೈಲಾಗ್ ಜನರನ್ನು ಸೆಳೆದಿತ್ತು. ಮಜಾ ಭಾರತದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಕ್ಕೆ, ಬಿಗ್ ಬಾಸ್ ಸೀಸನ್ 08 ಕ್ಕೂ ಆಯ್ಕೆ ಆಗಿದ್ದರು.

    MORE
    GALLERIES

  • 28

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಬಿಗ್ ಬಾಸ್ ಸೀಸನ್ 8 ರಲ್ಲಿ ಚೆನ್ನಾಗಿ ಆಡಿ, ಎಲ್ಲರಿಗೂ ಸ್ಪರ್ಧೆ ನೀಡಿ ವಿನ್ನರ್ ಆಗಿದ್ದಾರೆ. ಅಲ್ಲಿಂದ ಬಂದ ಮೇಲೆ ಮಂಜು ಪಾವಗಡ ಅವರಿಗೆ ಹೆಚ್ಚು ಹೆಚ್ಚು ಆಫರ್ ಗಳು  ಬರುತ್ತಿವೆ.

    MORE
    GALLERIES

  • 38

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಬಿಗ್ ಬಾಸ್ ನಿಂದ ಬಂದ ಮೇಲೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ಆರಂಭದಲ್ಲಿ ನಿರೂಪಕರಾಗಿದ್ದರು. ಆದ್ರೆ ಯಾಕೋ ಆ ಶೋನಿಂದ ಆಚೆ ಬಂದಿದ್ದರು.

    MORE
    GALLERIES

  • 48

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಮಂಜು ಪಾವಗಡ ಅವರು ಈಗ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಅಂತರಪಟದಲ್ಲಿ ನಟಿಸಲಿದ್ದಾರೆ.

    MORE
    GALLERIES

  • 58

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಕಲರ್ಸ್ ಕನ್ನಡದಲ್ಲಿ ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಪ್ಪನ ಪ್ರೀತಿ ಕಾಣಲು ಬಯಸಿದ ಮಗಳೇ, ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ.

    MORE
    GALLERIES

  • 68

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಕುಡುಕ ಅಪ್ಪನ ಪಾತ್ರದಲ್ಲಿ ಮಂಜು ಪಾವಗಡ ಅವರು ಅಭಿನಯಿಸುತ್ತಿದ್ದಾರೆ. ಮಂಜು ಅವರು ತಮ್ಮ ಸ್ವಂತ ಮಗಳನ್ನು ಪ್ರೀತಿ ಮಾಡ್ತಾ ಇದ್ದಾರೆ. ಆದ್ರೆ ಅವನ ಹೆಂಡ್ತಿಯ ಮೊದಲ ಮಗಳಿಗೆ ಮಾತ್ರ ಪ್ರೀತಿ ತೋರಲ್ಲ.

    MORE
    GALLERIES

  • 78

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಅಪ್ಪ ಕುಡಿದು, ಕುಡಿದು ಹೆಚ್ಚು ಸಾಲ ಮಾಡಿರುತ್ತಾನೆ. ಮನೆ ಬಳಿಯೇ ಸಾಲಗಾರರು ಬರುತ್ತಿದ್ದಾರೆ. ದೇವರ ಬಳಿ ಇರೋ ಅಪ್ಪನ ಕನಸು ನನಸು ಮಾಡಲು ಆರಾಧನಾ ಪ್ರಯತ್ನ ಪಡ್ತಾ ಇದ್ದಾಳೆ. ಅದಕ್ಕಾಗಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದಾಳೆ.

    MORE
    GALLERIES

  • 88

    Manju Pavagada: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ಯಾವ ಸೀರಿಯಲ್ ನೋಡಿ!

    ಶೀಘ್ರದಲ್ಲೇ ಧಾರಾವಾಹಿ ಪ್ರಸಾರವಾಗಲಿದೆ. ಮಂಜು ಪಾವಗಡ ಅವರ ಅಭಿನಯ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ನಟಿ ತನ್ವಿ ಬಾಲರಾಜ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ಹೊರ ಬಿದ್ದಿದೆ.

    MORE
    GALLERIES