ಬಿಗ್ ಬಾಸ್ ಸೀಸನ್ 08ರ ಕೆಲವು ಸ್ನೇಹಗಳು ಜನರನ್ನು ಸೆಳೆದಿದ್ದವು. ಅವುಗಳಲ್ಲಿ ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ವೈಷ್ಣವಿ ಗೌಡ, ರಘು ಗೌಡ ಸ್ನೇಹ ಎಲ್ಲರಿಗೂ ಇಷ್ಟ ಆಗಿತ್ತು. ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ವೈಷ್ಣವಿ ಗೌಡ, ರಘು ಗೌಡ ಮತ್ತೆ ಒಂದೆಡೆ ಸೇರಿದ್ದಾರೆ. ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿ ಎಂಜಾಯ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಅರವಿಂದ್ ಜೊತೆ ಬಿಟ್ರೆ ವೈಷ್ಣವಿ ಗೌಡ ಜೊತೆ ಹೆಚ್ಚು ಕ್ಲೋಸ್ ಆಗಿರುತ್ತಿದ್ದರು. ಇಬ್ಬರು ಟಾಪ್ 5 ನಲ್ಲಿ ಇದ್ದರು. ಬಹಳ ದಿನಗಳ ನಂತರ ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ವೈಷ್ಣವಿ ಗೌಡ, ರಘು ಗೌಡ ನಾಲ್ವರು ಒಟ್ಟಿಗೆ ಸೇರಿದ್ದಾರೆ. ಊಟ ಮಾಡಿ, ಸಂತೋಷವಾಗಿ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಲವು ಜನ ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 08 ರಲ್ಲಿ ವೈಷ್ಣವಿ ಗೌಡ ಮತ್ತು ರಘು ಗೌಡ ಆತ್ಮೀಯರಾಗಿದ್ದರು. ಹೊರಗೆ ಬಂದ ಮೇಲೂ ಅವರ ಸ್ನೇಹಾ ಅದೇ ರೀತಿ ಉಳಿದಿದೆ. ನಿಶ್ಚಿತಾರ್ಥದ ಗೊಂದಲದಿಂದ ಆಚೆ ಬಂದಿರುವ ವೈಷ್ಣವಿ ಗೌಡ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಸೀತಾರಾಮ ಮಾಡುತ್ತಿದ್ದಾರೆ. ಸಮಯ ಬಿಡುವು ಮಾಡಿಕೊಂಡು ಸ್ನೇಹಿತರನ್ನು ಭೇಟಿಯಾಗಿದ್ದಾರೆ. ನಿಮ್ಮ 4 ಜನರ ಸ್ನೇಹ ಹೀಗೆ ಮುಂದುವರೆಯಲಿ. ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ವೈಷ್ಣವಿ ಹೊಸ ಸೀರಿಯಲ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.