Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿ ಮದುವೆ ಇನ್ನು 10 ದಿನದಲ್ಲಿ ನಡೆಯಲಿದೆ. ಆ ಮದುವೆ ಬಗ್ಗೆ ತಾರಿಣಿ ಗೊಂದಲದಲ್ಲಿದ್ದಳೆ. ಅದನ್ನು ಪರಿಹರಿಸಲು ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಬಂದಿದ್ದಾರೆ. ಇಬ್ಬರ ನಡುವಿನ ಮಾತುಕತೆ ನೋಡಿ.

First published:

  • 18

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ಧಾರಾವಾಹಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಸೀರಿಯಲ್ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.

    MORE
    GALLERIES

  • 28

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ಈ ಧಾರಾವಾಹಿ ನಟಿ ತಾರಿಣಿ. ತಾರಿಣಿಗೆ ಇನ್ನು 10 ದಿನದಲ್ಲಿ ತಾರಿಣಿ ಮದುವೆ ನಡೆಯಲಿದೆ. ಅದು ಅವರಮ್ಮ ನೋಡಿರುವ ಧೀರಜ್ ಜೊತೆ. ಆದ್ರೆ ತಾರಿಣಿ ಗೊಂದಲದಲ್ಲಿದ್ದಾರೆ.ಅದನ್ನು ಪರಿಹರಿಸಲು ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಬಂದಿದ್ದಾರೆ.

    MORE
    GALLERIES

  • 38

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ರೂಪೇಶ್ ಶೆಟ್ಟಿ RJ ಆಗಿ ಪಾತ್ರ ನಿರ್ವಹಿಸಿದ್ದು, ತಾರಿಣಿ ತಾನು ಸಿತಾರಾ ಎಂದು ಮಾತಾನಾಡುತ್ತಿದ್ದಾಳೆ. ರೂಪೇಶ್ ಶೆಟ್ಟಿ ನಂಬಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳ್ತಾರೆ. ಅದಕ್ಕೆ ತಾರಿಣಿ ನಂಬಿಕೆ ಎಲ್ಲಾ ಸಂಬಂಧಕ್ಕೂ ಅಡಿಪಾಯ. ಅಡಿಪಾಯ ಸೇಫ್ ಇಲ್ಲ ಅಂದ್ರೆ ಮನೆ ಹೇಗೆ ಸೇಫ್ ಅಲ್ವೋ, ಹಾಗೆ ನಂಬಿಕೆ ಇಲ್ಲ ಅಂದ್ರದೆ ಸಂಬಂಧಗಳು ಸೇಫ್ ಅಲ್ಲ ಎಂದು ತಾರಿಣಿ ಹೇಳ್ತಾಳೆ.

    MORE
    GALLERIES

  • 48

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ಅಪ್ಪ ಮಗುವನ್ನು ಮೇಲಕ್ಕೆ ಎಸೆದು ಆಟವಾಡಿಸುತ್ತಾರೆ. ಆಗ ಮಗು ಕೆಳಗೆ ಬೀಳುವ ಭಯ ಇಲ್ಲದೇ ಆಟವಾಡುತ್ತೆ. ಅದಕ್ಕೆ ಕಾರಣ ನಂಬಿಕೆ. ಅಪ್ಪ-ಅಮ್ಮನ ಮೇಲೆ ನಂಬಿಕೆ ಅದು ಹುಟ್ಟಿದಾಗಲೇ ಬೆಳೆಯುತ್ತೆ ಎಂದು ರೂಪೇಶ್ ಶೆಟ್ಟಿ ಹೇಳ್ತಾರೆ.

    MORE
    GALLERIES

  • 58

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ಬೆಳೆಯುತ್ತಾ ಬೆಳೆಯುತ್ತಾ ಬೇರೆ ಬೇರೆ ಸಂಬಂಧಗಳಲ್ಲಿ ನಂಬಿಕೆ ಹುಡುಕುತ್ತೇವೆ. ಒಬ್ಬರ ಜೊತೆ ಒಡನಾಟ ಹುಟ್ಟುತ್ತೆ. ಒಮ್ಮೆ ನಂಬಿಕೆ ಅನ್ನೋ ಗೋಡೆ ಕುಸುದ್ರೆ, ಮತ್ತೆ ಅದನ್ನು ಕಟ್ಟುವುದು ತುಂಬಾ ಕಷ್ಟ. ಇದು ನಿಮಗೆ ಸತ್ಯ ಅನ್ನಿಸುತ್ತಾ ಎಂದು ರೂಪೇಶ್ ಶೆಟ್ಟಿ ಕೇಳುತ್ತಾರೆ.

    MORE
    GALLERIES

  • 68

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ನಮಗೆ ಹತ್ತಿರ ಇರುವವರು ನಂಬಿಕೆ ಮೋಸ ಮಾಡಲ್ಲ ಅನ್ನಿಸುತ್ತೆ. ಆದ್ರೆ ಅವರೇ ಸುಳ್ಳು ಹೇಳಿ ನಮ್ಮ ಮನಸ್ಸಿಗೆ ಬೇಸರ ಆಗೋ ರೀತಿ ನಡೆದುಕೊಳ್ತಾರೆ. ಅದಾದ ಮೇಲೆ ಅವರು ಏನೇ ಮಾಡಿದ್ರು ನಂಬಬೇಕು ಅನ್ನಿಸಲ್ಲ. ನಾಟಕ ಮಾಡ್ತಾರೆ ಎನ್ನಿಸುತ್ತೆ ಎಂದು ತಾರಿಣಿ ಹೇಳಿದ್ದಾಳೆ.

    MORE
    GALLERIES

  • 78

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ಈಗ ನಿಮಗೆ ಇರುವ ಗೊಂದಲಕ್ಕೆ ನಂಬಿಕೆ ಅನ್ನುವ ಫಾರ್ಮುಲಾ ಯೂಸ್ ಮಾಡಿ. ನಂಬಿಕೆ ಅನ್ನುವ ವಿಚಾರದಲ್ಲಿ ನಿಮ್ಮ ಸ್ನೇಹಿತ ಗೆಲ್ತಾರಾ? ನಿಮ್ಮ ಮನೆಯವರು ನೋಡಿದ ಹುಡುಗ ಗೆಲ್ತಾನಾ ನೋಡೋಣ ಎಂದು ರೂಪೇಶ್ ಶೆಟ್ಟಿ ಹೇಳ್ತಾರೆ.

    MORE
    GALLERIES

  • 88

    Roopesh Shetty: ರೂಪೇಶ್ ಶೆಟ್ಟಿ-ತಾರಿಣಿ ಟಾಕ್ ಶೋ! ಯಾರು ಜೊತೆ ನಾಯಕಿ ಮದುವೆ?

    ರೂಪೇಶ್ ಶೆಟ್ಟಿ ಅವರು ಹೇಳಿದ ರೀತಿ ತಾರಿಣಿ ಮಾಡ್ತಾಳಾ? ತಾರಿಣಿ ನಂಬಿಕೆ ಉಳಿಸಿಕೊಳ್ಳುವವರು ಯಾರು? ಯಾರನ್ನು ಮದುವೆ ಆಗ್ತಾಳೆ ಅನ್ನುವುದನ್ನು ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.

    MORE
    GALLERIES