BBK Sudeep: ಬಿಗ್ ಬಾಸ್ ವಾರಾಂತ್ಯದ ಕಾರ್ಯಕ್ರಮಕ್ಕೆ ಸುದೀಪ್ ಬರಲ್ವಾ! ಕಿಚ್ಚ ಕೋಪಗೊಂಡಿದ್ದಾರಾ?
ಬಿಗ್ ಬಾಸ್ ನೋಡೋ ಒಂದು ಅಭಿಮಾನಿಗಳ ವರ್ಗ ಇದ್ರೆ, ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನೋಡೋ ಇನ್ನೊಂದು ವರ್ಗವೇ ಇದೆ. ವಾರ ಪೂರ್ತಿ ನಡೆದ ಮನೆಯ ವಿಷಯವನ್ನು ಎಳೆ ಎಳೆ ಬಿಡಿಸಿ ಮನೆಯವರಿಗೆ ಅರ್ಥ ಮಾಡಿಸೋದು ನೋಡೋಕೆ ಚೆಂದ.
ಬಿಗ್ ಬಾಸ್ ನೋಡೋ ಒಂದು ಅಭಿಮಾನಿಗಳ ವರ್ಗ ಇದ್ರೆ, ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನೋಡೋ ಇನ್ನೊಂದು ವರ್ಗವೇ ಇದೆ. ವಾರ ಪೂರ್ತಿ ನಡೆದ ಮನೆಯ ವಿಷಯವನ್ನು ಎಳೆ ಎಳೆ ಬಿಡಿಸಿ ಮನೆಯವರಿಗೆ ಅರ್ಥ ಮಾಡಿಸೋದು ನೋಡೋಕೆ ಚೆಂದ.
2/ 8
ಸುದೀಪ್ ಅವರು ತಪ್ಪು ಮಾಡಿದವರಿಗೆ ತಿದ್ದಿ ಬುದ್ದಿ ಹೇಳ್ತಾರೆ. ಇಲ್ಲ ಸಲ್ಲದ್ದು ಮಾತನಾಡಿದ್ರೆ, ರೇಗಿ ಅವರೇ ವಾರ್ನಿಂಗ್ ಕೊಡ್ತಾರೆ. ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಸುದೀಪ ನಡೆಸಿ ಕೊಡ್ತಾರೆ
3/ 8
ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲು ಬರುತ್ತಿಲ್ವಂತೆ ಎನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಏಕೆ ಸುದೀಪ್ ಬರಲ್ಲ ಅನ್ನೋ ಪ್ರಶ್ನೆಗಳು ಹುಟ್ಟಿವೆ.
4/ 8
ಇನ್ನೊಂದೆಡೆ ಜನ ಸುದೀಪ್ ಅವರು ಬಿಗ್ ಬಾಸ್ ಶೋ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ತಿದ್ದಾರೆ. ನಿಜಕ್ಕೂ ಆಗಿರೋದೇನು ಎಂದು ಕೇಳ್ತಿದ್ದಾರೆ.
5/ 8
ಅಕ್ಟೋಬರ್ 21 ರಂದು ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ನಲ್ಲಿ ಕಿಚ್ಚ ಸುದೀಪ್ ಭಾಗವಹಿಸ್ತಾರಂತೆ. ಅದಕ್ಕೆ ಈ ವಾರ ಬಿಗ್ ಬಾಸ್ ವಾರಾಂತ್ಯದ ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಲಾಗ್ತಿದೆ.
6/ 8
ಎಂಹತ ಸಂದರ್ಭಗಳಲ್ಲೂ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ಬಿಟ್ಟಿಲ್ಲ. ಕಳೆದ 8 ಸೀಸನ್ ಗಳಿಂದ ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಿಚ್ಚನ ಗತ್ತು, ಗಾಂಭಿರ್ಯ ನೋಡಲು ಕಾಯ್ತಾ ಇರ್ತಾರೆ.
7/ 8
ಕಳೆದ ಬಾರಿ ಕೊರೊನಾ ಇದ್ದ ಕಾರಣ, ಕೆಲವೊಂದು ಶೋಗಳಿಗೆ ಸುದೀಪ್ ಅವರು ಬಂದಿಲ್ಲ. ಹೊರತಾಗಿ ಇನ್ಯಾವತ್ತೋ ವೀಕೆಂಡ್ ಕಾರ್ಯಕ್ರಮ ತಪ್ಪಿಸಿಲ್ಲ.
8/ 8
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ಬಗ್ಗೆ ನಟ ಸುದೀಪ್ ಆಗಲಿ, ಕಲರ್ಸ್ ಕನ್ನಡ ವಾಹಿನಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.