ಬಿಗ್ ಬಾಸ್, ರಾಜಾ ರಾಣಿ ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರು ಕೆಲ ದಿನಗಳ ಹಿಂದೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದರು.
2/ 8
ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಮನೆಗೆ ತುಳಜಾ ಭವಾನಿ ಬಂದಳು ಎಂದು ದಂಪತಿ ಖುಷಿಯಾಗಿದ್ದಾರೆ.
3/ 8
ಬಿಗ್ ಬಾಸ್ ಗೆ ಬಂದಿದ್ದ ಸಮೀರ್ ಆಚಾರ್ಯರು ಎಲ್ಲರಿಗೂ ಪರಿಚಿತರು. ಸಂಯುಕ್ತ ಹೆಗ್ಡೆ ಸಮೀರ್ ಆಚಾರ್ಯರಿಗೆ ಹೊಡೆದು, ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದರು. ಆಗ ಅದು ದೊಡ್ಡ ಸುದ್ದಿಯಾಗಿತ್ತು.
4/ 8
ಬಿಗ್ ಬಾಸ್ ನಿಂದ ಬಂದ ನಂತರ, ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರು ರಾಜಾ ರಾಣಿ ಕಾರ್ಯಕ್ರಮಕ್ಕೂ ಬಂದಿದ್ದರು. ಅಲ್ಲೂ ಆ ಜೋಡಿ ಹೆಸರು ಮಾಡಿತ್ತು. ಅಭಿಮಾನಿಗಳ ಮನಸ್ಸು ಗೆದ್ದಿದ್ದರು.
5/ 8
ರಾಜಾ ರಾಣಿ ಕಾರ್ಯಕ್ರಮದಲ್ಲಿ ಮನಸ್ಸಿನ ಮಾತು ಹೇಳಿಕೊಳ್ಳುವ ಟಾಸ್ಕ್ ನಲ್ಲಿ ಶ್ರಾವಣಿ ತನಗೆ ಒಂದು ಮಗು ಬೇಕು ಎಂದು ಸಮೀರ್ ಆಚಾರ್ಯರ ಬಳಿ ಹೇಳಿದ್ದರು. ಅದೊಂದು ಎಮೋಷನಲ್ ಎಪಿಸೋಡ್ ಆಗಿತ್ತು.
6/ 8
ಶ್ರಾವಣಿ ಅವರಿಗೆ ಸಂಪ್ರದಾಯದ ಪ್ರಕಾರ ಸೀಮಂತ ಮಾಡಲಾಗಿತ್ತು. ಜೋಕಾಲಿಯಲ್ಲಿ ದಂಪತಿ ಕೂತಿದ್ದಾರೆ. ಶ್ರಾವಣಿ ಅವರ ಮುಂದೆ ವಿವಿಧ ಬಗೆಯ ತಿನಿಸುಗಳನ್ನು ಸಂಭ್ರಮ ಪಟ್ಟಿದ್ದರು.
7/ 8
ರಾಜಾ ರಾಣಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೂ ಮುನ್ನ ಶ್ರಾವಣಿಯವರಿಗೆ ಒಮ್ಮೆ ಮಿಸ್ ಕ್ಯಾರೇಜ್ ಆಗಿತ್ತು. ಅದಾದ ಮೇಲೆ ಯಾಕೋ ಮಕ್ಕಳಾಗಿರಲಿಲ್ಲ ಎಂದು ಶ್ರಾವಣಿ ಹೇಳಿದ್ದರು.
8/ 8
ಬಹಳ ದಿನಗಳ ನಂತರ ಹೆಣ್ಣು ಮಗು ಹುಟ್ಟಿದ್ದು, ಮನೆಯವರೆಲ್ಲಾ ತುಂಬಾ ಖಷಿಯಾಗಿದ್ದಾರೆ. ಅಭಿಮಾನಿಗಳು ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.