ನಟಿ ಸ್ಪೂರ್ತಿ ಗೌಡ ಬಿಗ್ ಬಾಸ್ ಒಟಿಟಿ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು. ತಮ್ಮದೇ ವಿಭಿನ್ನ ಶೈಲಿಯಲ್ಲಿ ಆಟವಾಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಸ್ಪೂರ್ತಿ ಅವರು ಬಿಗ್ ಬಾಸ್ ಟಿವಿ ಸೀಸನ್‍ಗೆ ಆಯ್ಕೆ ಆಗ್ತಾರೆ ಎಂದುಕೊಂಡಿದ್ರು. ಆದ್ರೆ ಆಗಲಿಲ್ಲ.
2/ 8
ಸ್ಪೂರ್ತಿ ಗೌಡ ಅವರು ಚಿಟ್ಟೆ ಸೀರೆಯುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಸೀರೆಗೆ ಬ್ಲ್ಯೂ ಕಲರ್ ಬ್ಲೌಸ್ ಹಾಕಿಕೊಂಡಿದ್ದಾರೆ.
3/ 8
ಸೀರೆಯ ತುಂಬಾ ಚಿಟ್ಟೆಗಳಿವೆ. ಆ ಸೀರೆ ಸ್ಪೂರ್ತಿ ಅವರ ಅಂದವನ್ನು ಹೆಚ್ಚಿಸಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಇನ್ನೂ ಕೆಲವರು ನಿಮ್ಮ ವಾಚ್ ಬೆಲೆ ಎಷ್ಟು? ನಿಮ್ಮ ಟ್ಯಾಟೋ ಚೆನ್ನಾಗಿದೆ ಎಂದು ಹೇಳಿದ್ದಾರೆ.
4/ 8
ನಟಿ ಸ್ಪೂರ್ತಿ ಗೌಡ ಅವರು ಎಲ್ಲಾ ಫೋಟೋಗಳಲ್ಲಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಫೋಟೋಗಳ ಜೊತೆ ಆಶಾವಾದಿಯಾಗಿರಿ, ಉತ್ತಮ ದಿನಗಳು ದಾರಿಯಲ್ಲಿವೆ ಎಂದು ಬರೆದುಕೊಂಡಿದ್ದಾರೆ.
5/ 8
ಸ್ಪೂರ್ತಿ ಗೌಡ ಅವರು ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೀತಾ ವಲ್ಲಭ ಧಾರಾವಾಹಿಯಲ್ಲಿ ನಟಿಸಿ, ನಂತರ ತೆಲುಗು ಧಾರಾವಾಹಿಯಲ್ಲಿಯೂ ಅವರು ಮಿಂಚಿದ್ದರು. ಅಲ್ಲದೇ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಶೋನಲ್ಲಿಯೂ ಕೆಲ ಕಾಲ ಭಾಗವಹಿಸಿದ್ದರು.
6/ 8
ನಾನು ಮಲೆನಾಡಿನ ಹುಡುಗಿ, ಆದರೆ ಮಾಯಾನಗರಿ ಬೆಂಗಳೂರು ಎಂದರೆ ಇಷ್ಟ, ಅದರಲ್ಲೂ ಇಲ್ಲಿ ಶಾಪಿಂಗ್ ಮಾಡುವುದು ಎಂದರೆ ಇನ್ನೂ ಇಷ್ಟ ಎಂದು ಸ್ಪೂರ್ತಿ ಅವರು ಈ ಹಿಂದೆ ಹೇಳಿದ್ದರು.
7/ 8
ನಾನು ಐದನೇ ಕ್ಲಾಸ್‍ನಲ್ಲಿ ಮುಂಗಾರು ಮಳೆ ಸಿನಿಮಾ ನೋಡಿದ್ದು, ಆಗಲೇ ನಟಿ ಆಗಬೇಕು ಎಂದು ಆಸೆ, ಕನಸು ಶುರುವಾಗಿತ್ತು. ಅದು ಹಾಗೆಯೇ ಬೆಳೆದು ನಂತರ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆ ಎಂದು ತಮ್ಮ ಜರ್ನಿಯ ಬಗ್ಗೆ ಶೇರ್ ಮಾಡಿಕೊಂಡಿದ್ದರು ಸ್ಪೂರ್ತಿ ಅವರು.
8/ 8
ಸ್ಪೂರ್ತಿ ಅವರು ಸಿನಿಮಾದಲ್ಲಿ ನಟಿಸುವ ಕನಸು ಹೊಂದಿದ್ದಾರೆ. ಅವರಿಗೆ ಒಳ್ಳೆ ಅವಕಾಶ ಸಿಕ್ರೆ ಮಿಸ್ ಮಾಡಲ್ಲ ಎಂದಿದ್ದಾತೆ. ನಟಿ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.