ಈ ಬಾರಿ ಬಿಗ್ ಬಾಸ್ ಓಟಿಟಿ ಶುರುವಾಗಿತ್ತು. ಓಟಿಟಿ ಸೀಸನ್‍ಗೆ ಹಿಂದಿ ರಿಯಾಲಿಟಿ ಶೋ ರೋಡಿಸ್ ವಿನ್ನರ್ ನಂದು ಬಂದಿದ್ದರು. ಈ ಮೂಲಕ ಕನ್ನಡಿಗರಿಗೆ ಪರಿಚಯ ಆಗಿದ್ದಾರೆ. ಬಿಗ್ ಬಾಸ್ ಓಟಿಟಿ ಮೂಲಕ ಖ್ಯಾತಿ ಪಡೆದಿರುವ ನಂದು ಅವರು ಹೊಸ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ. ಅವರ ನ್ಯೂ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನಂದು ಅವರು ವೈಟ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ನಂದು ಅವರು ಫೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್ ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಓಟಿಟಿ ಮೂಲಕ ಮೋಡಿ ಮಾಡಿರುವ ಸ್ಪರ್ಧಿ ನಂದಿನಿ 5 ವಾರಕ್ಕೆ ಎಲಿಮಿನೇಷನ್ ಆಗಿ ಹೊರ ಹೋಗಿದ್ದರು. ಇವರು 5 ವಾರಕ್ಕೆ 25 ಲಕ್ಷ ಸಂಭಾವನೆ ಪಡೆದಿದ್ದರಂತೆ. ಅಲ್ಲದೇ ನಂದು-ಜಶ್ವಂತ್ ಬೋಪಣ್ಣ ಲವ್ ಸ್ಟೋರಿ ಜನರ ಗಮನ ಸೆಳೆದಿತ್ತು. ಆಗಾಗ ಇವರ ಕಿತ್ತಾಟ, ಮುನಿಸು ಮಾಡಿಕೊಳ್ತಾ ಇದ್ದರು. ಹಿಂದಿ ರಿಯಾಲಿಟಿ ಶೋ ರೋಡಿಸ್ ವಿನ್ನರ್ ನಂದು, ಅದೇ ಶೋನಲ್ಲಿ ಜಶ್ವಂತ್ ಜೊತೆ ಪ್ರೀತಿ ಆಗಿತ್ತಂತೆ. ಬಿಗ್ ಬಾಸ್ ಓಟಿಟಿಗೆ ಬರುವ ಮೊದಲೇ ಇಬ್ಬರ ನಡುವೆ ಪ್ರೀತಿ ಇತ್ತಂತೆ. ಆದ್ರೆ ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಇಬ್ಬರ ಪ್ರೀತಿ ಬ್ರೇಕಪ್ ಆಗಿದೆ. ಎಲ್ಲರಿಗೂ ಬಿಗ್ ಬಾಸ್ ಮನೆಗೆ ಹೋಗಿ ಲವ್ ಆದ್ರೆ, ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ. ಅಲ್ಲದೇ ಈ ಬಗ್ಗೆ ಮಾತನಾಡಿದ್ದ ನಂದಿನಿ ಅವರು, ಅವನಿಗೆ ಟೈಂ ಬೇಕು. ಎಲ್ಲರಿಗೂ ಅವರ ಲೈಫ್ ಬಗ್ಗೆ ನಿರ್ಧಾರ ತೆಗೆದುಕೊಳ್ಳೋ ಅಧಿಕಾರ ಇರುತ್ತೆ ಎಂದು ಹೇಳಿದ್ದರು.