ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿರುವ ನಟ ರೂಪೇಶ್ ಶೆಟ್ಟಿ ಅವರು ದೊಡ್ಡ ಮೊತ್ತವನ್ನು ವಿನ್ನಿಂಗ್ ಪ್ರೈಜ್ ಆಗಿ ಮನೆಗೆ ಒಯ್ಯಲಿದ್ದಾರೆ. ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಗೆದ್ದಿದ್ದು ಎಷ್ಟು ಗೊತ್ತಾ?
2/ 8
ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಅವರು ಬಿಗ್ ಬಾಸ್ ಕಡೆಯಿಂದ 50 ಲಕ್ಷ ಹಾಗೂ ಸ್ಪಾನ್ಸರ್ ಕಡೆಯಿಂದ 10 ಲಕ್ಷ ಪಡೆಯಲಿದ್ದು ಒಟ್ಟು 60 ಲಕ್ಷ ಪಡೆಯಲಿದ್ದಾರೆ.
3/ 8
ಬಹುತೇಕ ಎಲ್ಲ ಬಹುಮಾನ ಮೊತ್ತಗಳಿಗೆ ಟ್ಯಾಕ್ಸ್ ಕತ್ತರಿ ಬೀಳುವಂತೆ ಇಲ್ಲಿಯೂ ಅದು ಅನ್ವಯಿಸಲಿದೆ. ಸುಮಾರು 18 ಲಕ್ಷ ಡಿಡಕ್ಷನ್ ನಂತರ 42 ಲಕ್ಷ ರೂಪಾಯಿ ಪಡೆಯಲಿದ್ದಾರೆ ರೂಪೇಶ್ ಶೆಟ್ಟಿ.
4/ 8
ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಇಬ್ಬರೂ ಬಿಗ್ ಬಾಸ್ ಒಟಿಟಿಯಲ್ಲಿ ಸ್ಫರ್ಧಿಸಿದ್ದರು. ಅಲ್ಲಿಂದ ಜೊತೆಯಾಗಿ ಟಿವಿ ಶೋನಲ್ಲಿಯೂ ಭಾಗವಹಿಸಿದ್ದಾರೆ.
5/ 8
ಓಟಿಟಿ ಮನೆಯಿಂದ ಬಿಗ್ ಮನೆಗೆ ರೂಪೇಶ್ ಶೆಟ್ಟಿ ಅಲ್ಲಿಯಂತೆ ಇಲ್ಲಿಯೂ ಒಳ್ಳೆಯ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ತುಂಬಾ ಆ್ಯಕ್ಟಿವ್ & ಹ್ಯಾಪಿಯಾಗಿದ್ದರು.
6/ 8
ಬಿಗ್ಬಾಸ್ ವಿಜೇತನನ್ನು ಅನೌನ್ಸ್ ಮಾಡಿದ ಕಿಚ್ಚ ಸುದೀಪ್ ಅವರು ರೂಪೇಶ್ ಶೆಟ್ಟಿ ಅವರ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ. ರಾಕೇಶ್ ಅಡಿಗ ಫಸ್ಟ್ ರನ್ನರ್ ಅಪ್ ಆಗಿದ್ದಾರೆ.
7/ 8
ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ಸಂಬಂಧ ಮನೆಯೊಳಗೆ ಭಾರೀ ಸುದ್ದಿಯಾಗಿತ್ತು. ಈ ಜೋಡಿ ಇನ್ನು ಹೇಗಿರುತ್ತಾರೆ ನೋಡಬೇಕು.
8/ 8
ಅಂತೂ ಶೈನಿ ಶೆಟ್ಟಿ ನಂತರ ಮತ್ತೊಬ್ಬ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಬಿಗ್ಬಾಸ್ ಕಪ್ ಎತ್ತಿದ್ದು ಎಲ್ಲರಿಗೂ ಹೆಮ್ಮೆ ತಂದಿದೆ. ಶೋ ಮೂಲಕ ಇವರು ಅಪಾರ ಅಭಿಮಾನಿಗಳನ್ನೂ ಗಳಿಸಿದ್ದಾರೆ.