ಬಿಗ್ಬಾಸ್ ಮನೆಯಿಂದ ಹೊರಬಂದ ನಂತರ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಭೇಟಿಯಾಗಿ ಜೊತೆಯಾಗಿ ಕಾಫಿ ಕುಡಿದಿದ್ದಾರೆ. ಅವರ ಫೋಟೋಸ್ ಕೂಡಾ ಹಂಚಿಕೊಂಡಿದ್ದಾರೆ.
2/ 7
ರೂಪೇಶ್ ಶೆಟ್ಟಿ ಅವರು ಫೋಟೋ ಹಂಚಿಕೊಂಡಿದ್ದು ಸಾನ್ಯಾ ಅವರು ಗ್ರೀನ್ ಟಾಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ರೂಪೇಶ್ ಹಾಗೂ ಸಾನ್ಯಾ ಕ್ಯೂಟ್ ಸ್ಮೈಲ್ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
3/ 7
ಇವರ ಫೋಟೋಗಳಿಗೆ 81 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಫೋಟೋ ಮೆಚ್ಚಿಕೊಂಡು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
4/ 7
ನೆಟ್ಟಿಗರು ಇದು ಬಹಳ ದಿನಗಳಿಂದ ನೋಡಲು ಕಾಯುತ್ತಿದ್ದ ಫೋಟೋ, ಸಾನ್ಯಾ ಅವರನ್ನು ಮಿಸ್ ಮಾಡಲೇಬೇಡಿ, ಅವರು ತುಂಬಾ ಒಳ್ಳೆಯ ಹುಡುಗಿ ಎಂದಿದ್ದಾರೆ ನೆಟ್ಟಿಗರು.
5/ 7
ಇನ್ನೂ ಕೆಲವರು ನೀವು ನೋಡಲು ಕ್ಯೂಟ್ ಆಗಿದ್ದೀರಿ, ಆದರೆ ಒಂದು ಕಂಡೀಷನ್ ಇದೆ, ಮುಂದೆ ನೀವಿಬ್ಬರೂ ಮದುವೆಯಾಗ್ಬೇಕು ಅಂತ ಕೇಳಿದ್ದಾರೆ ನೆಟ್ಟಿಗರು.
6/ 7
ಇವರಿಬ್ಬರ ಅಪರೂಪದ ಫೋಟೋಗಳಿಗೆ 1000ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ಇವರು ಭೇಟಿ ಮಾಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
7/ 7
ಬಹಳಷ್ಟು ಜನರು ಸಾನ್ಯಾ ಅಯ್ಯರ್ ,ರೂಪೇಶ್ ಶೆಟ್ಟಿ ಅವರು ಇನ್ನೂ ಯಾಕೆ ಭೇಟಿ ಮಾಡಿಲ್ಲ ಎಂದು ಕೇಳಿದ್ದಾರೆ. ಈಗ ಇವರು ಭೇಟಿ ಮಾಡಿದ್ದು ಅವರ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.