Roopesh Shetty-Sanya Iyer: ಬಿಗ್ಬಾಸ್ ಜೋಡಿ ಸಾನ್ಯಾ-ರೂಪೇಶ್ ವಯಸ್ಸಿನ ಅಂತರ ಎಷ್ಟು ಗೊತ್ತಾ?
ಬಿಗ್ಬಾಸ್ ಸೀನ್ 9ರಲ್ಲಿ ಬಂದ ಕ್ಯೂಟೆಸ್ಟ್ ಜೋಡಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಎಲ್ಲೆಡೆ ಫೇಮಸ್ ಆಗಿದ್ದಾರೆ. ಈ ಲವ್ ಬರ್ಡ್ಸ್ ನಡುವಿನ ಏಜ್ ಗ್ಯಾಪ್ ಗೊತ್ತೇ?
1/ 11
ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ ಕಪ್ ಗೆದ್ದು ಮನೆಯಿಂದ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸೀಸನ್ 9ರಲ್ಲಿ ಕ್ಯೂಟ್ ಲವ್ ಸ್ಟೋರಿ ಇತ್ತು.
2/ 11
ಬಿಗ್ ಬಾಸ್ ಒಟಿಟಿಯಿಂದ ಶುರುವಾದ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಲವ್ಸ್ಟೋರಿ ಬಿಗ್ಬಾಸ್ ಮನೆಗೂ ಬಂದು ಸಖತ್ ಸುದ್ದಿ ಮಾಡಿದೆ.
3/ 11
ಮನೆಯಿಂದ ಹೊರಬಂದ ಮೇಲೂ ಇವರು ಸಖತ್ ಕ್ಯೂಟ್ ಆಗಿ ಜೊತೆಯಾಗಿದ್ದಾರೆ. ಸಾನ್ಯಾ ಹಾಗೂ ರೂಪೇಶ್ ನಡುವಿನ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ?
4/ 11
21 ಸೆಪ್ಟೆಂಬರ್ 1998ರಲ್ಲಿ ಹುಟ್ಟಿದ ಸಾನ್ಯಾ ಐಯ್ಯರ್ ವಯಸ್ಸು ಈಗ 24 ವರ್ಷ. 14 ಆಗಸ್ಟ್ 1990ರಲ್ಲಿ ಹುಟ್ಟಿದ ನಟ ರೂಪೇಶ್ ಶೆಟ್ಟಿಗೆ ಈಗ ವಯಸ್ಸು 32.
5/ 11
ಈ ಜೋಡಿಯ ವಯಸ್ಸಿನ ಅಂತರ 8 ವರ್ಷ. ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಇಬ್ಬರಿಗೂ ಪರ್ಫೆಕ್ಟ್ ಮ್ಯಾರೇಜ್ ಏಜ್ ಅಂತಿದ್ದಾರೆ ಅವರ ಅಭಿಮಾನಿಗಳು.
6/ 11
ಆದರೆ ಇವರು ಬೇಗ ಮದುವೆಯಾಗೋದು ಡೌಟ್. ಯಾಕೆಂದರೆ ಇಬ್ಬರ ಕೆರಿಯರ್ ಈಗಷ್ಟೇ ಶುರುವಾಗಿದೆ. ರೂಪೇಶ್ ಅವರ ಸಿನಿಮಾ ಕೂಡಾ ರಿಲೀಸ್ ಆಗುವುದರಲ್ಲಿದೆ.
7/ 11
ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಹಾಗಾಗಿ ಸದ್ಯ ಅವರು ಸಿನಿಮಾ ಸಂಬಂಧ ಬ್ಯುಸಿ ಇರಲಿದ್ದಾರೆ.
8/ 11
ಸಾನ್ಯಾ ಹಾಗೂ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದರು. ಇವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು.
9/ 11
ಸಾನ್ಯ ಅಯ್ಯರ್ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಚಿಕ್ಕಮಕ್ಕಳಂತೆ ಅತ್ತಿದ್ದರು. ಆ ಸಂದರ್ಭದಲ್ಲಿ ಪ್ರೇಕ್ಷಕರು ಕೂಡಾ ಸ್ವಲ್ಪ ಬೇಸರಗೊಂಡಿದ್ದರು.
10/ 11
ಸಾನ್ಯಾ ಮನೆಯಿಂದ ಹೊರ ಹೋದರೆ ನನ್ನ ಮರೆಯುವುದಿಲ್ಲ ಅಲ್ವಾ ಎಂದು ರೂಪೇಶ್ ಕೇಳಿದ್ದರು. ಇದಕ್ಕೆ ಮರೆಯಲ್ಲ ಎಂದು ಉತ್ತರಿಸಿದ್ದರು ನಟಿ.
11/ 11
ಸಾನ್ಯ ಅಯ್ಯರ್ ಅಯ್ಯರ್ ಅವರು ಪುಟ್ಟ ಗೌರಿ ಮದುವೆ ಸೀರಿಯಲ್ನಲ್ಲಿ ಪುಟ್ಟಗೌರಿ ಬಾಲ್ಯದ ಪಾತ್ರವನ್ನು ಮಾಡಿ ಫೇಮಸ್ ಆಗಿದ್ದಾರೆ. ಅವರ ತಾಯಿಯೂ ಸೀರಿಯಲ್ ನಟಿ
First published: