ಬಿಗ್ ಬಾಸ್ ಮನೆಯಲ್ಲಿರುವ ನಟಿ ದಿವ್ಯಾ ಉರುಡುಗ ಅವರು ಫಿನಾಲೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಯೂ ನಟಿ ಫಿನಾಲೆ ತಲುಪಿದ್ದರು. ಈಗ ದಿವ್ಯಾ ಅವರು ಬಿಗ್ ಬಾಸ್ ಸೀಸನ್ 9ರಲ್ಲಿಯೂ ಫಿನಾಲೆ ತಲುಪಿದ್ದು ಅವರ ಬಗ್ಗೆ ಸಹ ಸ್ಪರ್ಧಿಗಳು ಮಾತನಾಡಿದ್ದಾರೆ. ಈ ಸಂದರ್ಭ ತುಂಬಾ ಹೈಲೈಟ್ ಆಗಿದ್ದು ದಿವ್ಯಾ ಅವರ ನಗು. ದಿವ್ಯಾ ಅವರು ತುಂಬಾ ಓಪನ್ ಆಗಿ ನಗುತ್ತಾರೆ ಎಂದಿದ್ದಾರೆ ಸಹ ಸ್ಪರ್ಧಿಗಳು. ತುಂಬಾ ಕೇರಿಂಗ್, ಹಾಗೆಯೇ ಒಂದು ಸಲ ಫ್ರೆಂಡ್ಸ್ ಆಗಿಬಿಟ್ಟರೆ ನಂತರ ತುಂಬಾ ಕ್ಲೋಸ್ ಆಗಿರುತ್ತಾರೆ, ಮುಕ್ತವಾಗಿರುತ್ತಾರೆ ಎಂದಿದ್ದಾರೆ. ದಿವ್ಯಾ ಅವರು ಬಹಳ ಕಾಳಜಿ ಮಾಡ್ತಾರೆ, ಎಲ್ಲರನ್ನೂ ನಗಿಸುತ್ತಾ ಇರುತ್ತಾರೆ ಎಂದಿದ್ದಾರೆ. ಒಟ್ಟಾಗಿ ಅವರ ನಗು ಮುಖದ ಮಗ್ಗೆ ಮೆಚ್ಚುಗೆ ಬಂದಿದೆ. ದೀಪಿಕಾ ದಾಸ್ ಅವರು ದಿವ್ಯಾ ಅವರ ಬಗ್ಗೆ ಮಾತನಾಡಿ ಅವಉ ಸೆಲ್ಫ್ ಮೇಡ್, ಸ್ಟ್ರಾಂಗ್ ಗರ್ಲ್ ಎಂದು ಹೊಗಳಿದ್ದಾರೆ. ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರೂ ಈ ಬಾರಿಯೂ ನಟಿ ಫಿನಾಲೆ ತನಕ ತಲುಪಿರುವ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.