ಬಿಗ್ಬಾಸ್ ಸೀಸನ್ 9ರಲ್ಲಿ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಅವರು ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಇವರಿಬ್ಬರ ಮಧ್ಯೆ ಕುಚ್ ಕುಚ್ ಇದೆ ಎಂದೂ ಜನ ಮಾತನಾಡಿಕೊಂಡಿದ್ದರು.
2/ 8
ಅಮೂಲ್ಯ ಅವರು ಕಂಪ್ಲೀಟ್ ಜಾಲಿ ಮೂಡ್ ಪರ್ಸನ್ ಆಗಿದ್ರೆ ರಾಕೇಶ್ ಅಡಿಗ ಅವರು ಶಾಂತ ಸ್ವಭಾವದ ಸಿಂಪಲ್ ಸಾದಾ ಸೀಸಾ ವ್ಯಕ್ತಿ. ಇವರು ಬೇಗ ಕ್ಲೋಸ್ ಆಗಿದ್ದರು.
3/ 8
ಇದೀಗ ನಟಿ ಅಮೂಲ್ಯ ಗೌಡ ಅವರು ಇನ್ಸ್ಟಾಗ್ರಾಮ್ನಲ್ಲಿ ರಾಕೇಶ್ ಅಡಿಗ ಜೊತೆ ಇರುವಂತಹ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಒಟ್ಟು ನಾಲ್ಕು ಫೋಟೋಗಳಿದ್ದವು.
4/ 8
ರಾಕೇಶ್ ಅಡಿಗ ಅವರು ಆರೆಂಜ್ ಕಲರ್ ಶರ್ಟ್ ಧರಿಸಿದ್ದರೆ ಅಮೂಲ್ಯ ಗೌಡ ಅವರು ಬ್ಲಾಕ್ ಔಟ್ಫಿಟ್ ಧರಿಸಿದ್ದರು. ಅವರ ಕನ್ನಡಕ ಇನ್ನೊಂದು ಅಟ್ರಾಕ್ಷನ್.
5/ 8
ಇಬ್ಬರೂ ಟೇಬಲ್ನಲ್ಲಿ ಎದುರುಬದುರಾಗಿ ಕುಳಿತಿದ್ದು ಅವರ ಮುಂದೆ ಖಾಲಿಯಾದ ಗ್ಲಾಸ್ ಇತ್ತು. ಇದನ್ನು ನೋಡಿದರೆ ಕೋಲ್ಡ್ ಕಾಫಿ ಕುಡಿದಂತೆ ಕಂಡುಬಂದಿದೆ.
6/ 8
ಅಲ್ಲಿ ಒಂದೇ ಗ್ಲಾಸ್ ಇದ್ದ ಕಾರಣ ಇಬ್ಬರೂ ಒಂದರಲ್ಲೇ ಸ್ಟ್ರಾ ಹಾಕಿ ಕೋಲ್ಡ್ ಕಾಫಿ ಕುಡಿದಿದ್ದಾರಾ ಎಂದು ಚರ್ಚೆ ಮಾಡ್ತಾ ಇದ್ದಾರೆ ನೆಟ್ಟಿಗರು. ಏನೇ ಇರ್ಲಿ, ಆತ್ಮೀಯರು ಭೇಟಿಯಾಗಿ ಒಂದಷ್ಟು ಹೊತ್ತು ಖುಷಿಯಾಗಿ ಕಳೆದಿದ್ದಾರೆ.
7/ 8
ಅಮೂಲ್ಯ ಗೌಡ ಅವರು ಪೋಸ್ಟ್ ಶೇರ್ ಮಾಡಿ, ಹೌದು ನಾವು ಭೇಟಿಯಾಗಿದ್ದೇವೆ, ಯಾವುದೂ ಬದಲಾಗಿಲ್ಲ. ಬಿಗ್ಬಾಸ್ ಮನೆಯಲ್ಲಿ ಈ ಜೀವನದ ಗೆಳೆಯ ಸಿಕ್ಕಿದ್ದಾನೆ ಎಂದಿದ್ದಾರೆ.
8/ 8
ನೀವು ನನಗೆ ಸಾಕಷ್ಟು ಕಲಿಸಿದ್ದೀರಿ. ಎಷ್ಟೊಂದು ಪ್ಯೂರ್ ಸೋಲ್. ಯಾವುದೇ ವ್ಯಕ್ತಿ ಇಷ್ಟೊಂದು ಶಾಂತವಾಗಿ ಕೂಲ್ ಆಗಿ ಹೇಗಿರೋಕೆ ಸಾಧ್ಯ ಎಂದು ಅಚ್ಚರಿಯಾಗುತ್ತೆ ಎಂದಿದ್ದಾರೆ.