BBK8-Divya Suresh: ಮಧ್ಯರಾತ್ರಿ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್: ಕಣ್ಣೀರಿಟ್ಟ ಮಂಜು ಪಾವಗಡ..!
Bigg Boss Kannada Season 8: ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಟ್ಟ ಆರು ಮಂದಿಯಲ್ಲಿ ದಿವ್ಯಾ ಸುರೇಶ್ ಇಲ್ಲಿಗೆ ತಮ್ಮ ಪಯಣ ಕೊನೆಗೊಳಿಸಿ ಮನೆಗೆ ಮರಳಿದ್ದಾರೆ. ಈ ಸೀಸನ್ನ ಕೊನೆಯ ಎವಿಕ್ಷನ್ನಲ್ಲಿ ದಿವ್ಯಾ ಸುರೇಶ್ ಎಲಿಮಿನೇಟ್ ಆಗಿದ್ದಾರೆ. ಫಿನಾಲೆಗೆ ಇನ್ನು ನಾಲ್ಕು ದಿನಗಳು ಇರುವಾಗಲೇ ದಿವ್ಯಾ ಸುರೇಶ್ ಆಟದಿಂದ ಹೊರ ಬಿದ್ದಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ಅವರ ಜರ್ನಿ ಇಂದಿಗೆ ಕೊನೆಗೊಂಡಿದೆ.
2/ 10
ಹಂತ ಹಂತವಾಗಿ ನಡೆದ ಈ ಸೀಸನ್ನ ಕಡೆಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ದಿವ್ಯಾ ಸುರೇಶ್ ಮನೆಯಿಂದ ಹೊರ ಬಂದಿದ್ದಾರೆ.
3/ 10
ಈ ಸೀಸನ್ನಲ್ಲಿ ದಿವ್ಯಾ ಸುರೇಶ್ ಅವರ ಪಯಣ ಸಾಕಷ್ಟು ಏರುಪೇರಿನಿಂದ ಕೂಡಿತ್ತು.
4/ 10
ಟಾಸ್ಕ್ನ ವಿಷಯದಲ್ಲಿ ಸದಾ ಮುಂದಿರುತ್ತಿದ್ದ ದಿವ್ಯಾ ಯಾವಾಗಲೂ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು.
5/ 10
ಮಂಜು ಜತೆಗಿನ ಜಗಳ ಹಾಗೂ ಮನಸ್ತಾಪ ಕಡೆಗೂ ಈ ಮನೆಯಲ್ಲೇ ಸುಖಾಂತ್ಯ ಕಂಡಿದೆ.
6/ 10
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ಅವರು ಮಾಡಿದ್ದ ವಿಶೇಷ ವಿಶ್ ಸಹ ಪೂರ್ಣಗೊಂಡಿದೆ.
7/ 10
ಮಂಜು ಜತೆ ತಮ್ಮ ಫ್ರೆಂಡ್ಶಿಪ್ ಅನ್ನು ಸೆಲಬ್ರೇಟ್ ಮಾಡಿದ ದಿವ್ಯಾ ತಮ್ಮ ತಪ್ಪುಗಳಿಗೆ ಕ್ಷಮೆ ಸಹ ಯಾಚಿಸಿದ್ದಾರೆ.
8/ 10
ಕಳೆದ ವಾರಾಂತ್ಯ ಪ್ರಶಾಂತ್ ಸಂಬರಗಿ, ಅರವಿಂದ್, ಮಂಜು, ವೈಷ್ಣವಿ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ನಾಮಿನೇಟ್ ಆಗಿದ್ದರು.
9/ 10
ಐದು ಹಂತಗಳಲ್ಲಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೊದಲಿಗೆ ಅರವಿಂದ್, ನಂತರ ವೈಷ್ಣವಿ , ಆಮೇಲೆ ಮಂಜು, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬಗರಿ ಸೇಫ್ ಆಗುತ್ತಾರೆ.
10/ 10
ಐದನೇ ಹಂತದಲ್ಲಿ ಪ್ರಶಾಂತ್ ಹಾಗೂ ದಿವ್ಯಾ ಸುರೇಶ್ ಎರಡು ರೂಮ್ನೊಳಗೆ ಹೋಗುತ್ತಾರೆ. ಸೇಫ್ ಆದ ಪ್ರಶಾಂತ್ ಮತ್ತೆ ಆ ಕೋಣೆಯಿಂದ ಹೊರ ಬಂದರೆ, ದಿವ್ಯಾ ಸುರೇಶ್ ಅವರು ಮನೆಯವರಿಗೆ ಗುಡ್ ಬೈ ಹೇಳದಂತೆಯೇ ಮನೆಯಿಂದ ಹೊರ ನಡೆಯುತ್ತಾರೆ.