BBK8- Divya Uruduga: ದಿವ್ಯಾ ಉರುಡುಗ ಕೂದಲಿಗೆ ಬಿತ್ತು ಕತ್ತರಿ: ಹೇಗಿದೆ ಗೊತ್ತಾ ಅರವಿಂದ್ ಮಾಡಿದ ಹೇರ್ ಕಟ್ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಅವರು ಹೇಳಿದಂತೆಯೇ ಅರವಿಂದ್ ಅವರು ದಿವ್ಯಾ ಉರುಡುಗ ಅವರಿಗೆ ಹೇರ್ ಕಟ್ ಮಾಡಿದ್ದಾರೆ. ಉದ್ದವಾಗಿದ್ದ ಕೂದಲಿಗೆ ಕೊನೆಗೂ ಕತ್ತರಿ ಹಾಕಿದ್ದಾರೆ. ಅರವಿಂದ್ ಅವರು ಮಾಡಿರುವ ಹೇರ್ ಕಟ್ ಹೇಗಿದೆ ಗೊತ್ತಾ..? (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
1 / 7
ದಿವ್ಯಾ ಉರುಡುಗ ಅವರಿಗೆ ಉದ್ದವಾದ ಕೂದಲು ಅಂದ್ರೆ ತುಂಬಾ ಇಷ್ಟವಂತೆ. ಅದಕ್ಕೆ ಅವರು ಕಷ್ಟ ಪಟ್ಟು ಇಷ್ಟು ಉದ್ದ ಕೂದಲು ಬೆಳೆಸಿಕೊಂಡಿದ್ದಾರಂತೆ.
2 / 7
ದಿವ್ಯಾ ಉರುಡುಗ ಅವರಿಗೆ ಹೇರ್ ಕಟ್ ಮಾಡಿ ಒಂದು ಹೊಸ ಸ್ಟೈಲ್ ನೀಡಬೇಕೆಂದು ಕಿಚ್ಚ ಸುದೀಪ್ ಅವರು ಕಳೆದ ಶನಿವಾರದ ಸಂಚಿಕೆಯನ್ನು ಟಾಸ್ಕ್ ನೀಡಿದ್ದರು.
3 / 7
ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ದಿವ್ಯಾ ಉರುಡುಗ ಅವರ ಕೇಶಕ್ಕೆ ಅರವಿಂದ್ ಕತ್ತರಿ ಹಾಕಿದ್ದಾರೆ.
4 / 7
ದಿವ್ಯಾ ಉರುಡುಗ ಅವರ ಇಷ್ಟಕ್ಕೆ ತಕ್ಕಂತೆ ಯಾವುದೇ ಆತಂಕವಿಲ್ಲದೆ ಅರವಿಂದ್ ಅವರು ವಿ ಕಟ್ ಮಾಡಿದ್ದಾರೆ.
5 / 7
ತುಂಬಾ ಜಾಗರೂಕರಾಗಿ ಒಂದು ಇಂಚಿನಷ್ಟು ಮಾತ್ರ ಕೂದಲು ಕತ್ತರಿಸಿದ್ದಾರೆ.
6 / 7
ಅರವಿಂದ್ ಮಾಡಿದ ಈ ಹೇರ್ ಕಟ್ ನೋಡಿದ್ರೆ ಇದು ಹೊಸ ಸ್ಟೈಲ್ ತರ ಅನಿಸದಿದ್ದರೂ, ಟಾಸ್ಕ್ ಕೊಟ್ಟಿದ್ದಕ್ಕೆ ಅರವಿಂದ್ ಹೇರ್ ಕಟ್ ಮಾಡಿದಂತಿದೆ.
7 / 7
ಅರವಿಂದ್ ಮಾಡಿರುವ ಹೇರ್ ಕಟ್ ಬಗ್ಗೆ ನಾಳಿನ ಸಂಚಿಕೆಯಲ್ಲಿ ಸುದೀಪ್ ಏನು ಹೇಳುತ್ತಾರೆ ಅನ್ನೋದು ತಿಳಿಯಲಿದೆ.
First published: August 06, 2021, 22:28 IST