Bigg Boss Kannada 8: ದಿವ್ಯಾ ಉರುಡುಗ ಕೈ ಹಿಡಿಯಲಿಲ್ಲ ಅದೃಷ್ಟ: ಅರವಿಂದ್ ಜತೆಗಿನ ಸ್ನೇಹವೇ ಮುಳುವಾಯಿತಾ..!

Bigg Boss Kannada 8: ಬಿಗ್ ಬಾಸ್​ ಮನೆಯಲ್ಲಿ ಟಾಪ್​ 3 ಸ್ಥಾನದಲ್ಲಿರುವ ಮಂಜು ಪಾವಗಡ, ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಅವರು ಯಾರು ವಿನ್ನರ್ ಆಗಲಿದ್ದಾರೆ ಅನ್ನೋ ಆತಂಕದಲ್ಲಿ ಮುಳುಗಿದ್ದರು. ಆಗಲೇ ಈ ಸೀಸನ್​ನ ಕಡೆಯ ಎಲಿಮಿನೇಷನ್​ ಪ್ರಕ್ರಿಯೆ ಆರಂಭವಾಗುತ್ತದೆ. ಇದರಲ್ಲಿ ದಿವ್ಯಾ ಉರುಡುಗ ಎಲಿಮಿನೇಟ್ ಆಗಿದ್ದಾರೆ. ನಿನ್ನೆಯಿಂದಲೇ ದಿವ್ಯಾ ಉರುಡುಗ ಅವರು ಇರುವ ಸ್ಪರ್ಧಿಗಳಲ್ಲಿ ವೀಕ್​ ಅಂತ ಮನೆಯಿಂದ ಹೊರ ಹೋಗಿರುವ ಸದಸ್ಯರು ಹೇಳಿದ್ದರು. ಇನ್ನು ಅವರು ವೀಕ್​ ಎಂದು ನಿರ್ಧರಿಸಲು ಕಾರಣ ಅರವಿಂದ್ ಜೊತೆಗಿನ ಸ್ನೇಹವೇ ಆಯ್ತಾ..? ಅರವಿಂದ್​​ ಜೊತೆಗಿನ ಸ್ನೇಹವೇ ದಿವ್ಯಾ ಉರುಡುಗ ಗೆಲುವಿನ ಕೊನೆಯ ಮೆಟ್ಟಿಲು ಹತ್ತದಿರಲು ಕಾರಣವಾಯ್ತಾ..? (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: