Dhanushree: ಹೊಸ ಕಾರಿನ ಮುಂದೆ ಪೋಸ್ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಧನುಶ್ರೀ: ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದ ನಟಿ
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ಧನುಶ್ರೀ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಧನುಶ್ರೀ, ನಂತರದಲ್ಲಿ ಸಾಲು ಸಾಲು ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಟಿಕ್ಟಾಕ್ನಲ್ಲಿ ಸ್ಟಾರ್ ಆಗಿದ್ದ ಧನುಶ್ರೀ ಈಗ ಹೊಸ ಕಾರು ಖರೀದಿಸಿರುವ ಖುಷಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಧನುಶ್ರೀ ಇನ್ಸ್ಟಾಗ್ರಾಂ ಖಾತೆ)
ಟಿಕ್ಟಾಕ್ನಲ್ಲಿ ತಮ್ಮ ವಿಡಿಯೋಗಳ ಮೂಲಕ ಲಕ್ಷಾಂತರ ಮಂದಿ ಹಿಂಬಾಲಕರನ್ನು ಹೊಂದುವ ಮೂಲಕ ಆಗಲೇ ಸ್ಟಾರ್ ಆಗಿದ್ದರು ಧನುಶ್ರೀ. ಟಿಕ್ಟಾಕ್ ಬ್ಯಾನ್ ಆದ ನಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಮತ್ತಷ್ಟು ಫೇಮಸ್ ಆದರು.
2/ 7
ಬಿಗ್ ಬಾಸ್ ಸೀಸನ್ 8ರಲ್ಲಿ ಗ್ಲಾಮರ್ ದೀವಾ ಆಗಿ ಕಾಣಿಸಿಕೊಂಡಿದ್ದ ಧನುಶ್ರೀ, ಅಲ್ಲಿ ಕಳೆದಿದ್ದು ಕೆಲವೇ ಕೆಲವು ದಿನಗಳು. ಬಿಗ್ ಬಾಸ್ ಕನ್ನಡ ಸೀಸನ್ನಲ್ಲಿ ಮೊದಲು ಮನೆಯಿಂದ ಹೊರ ಬಂದ ಸ್ಪರ್ಧಿಗಯಾಗಿದ್ದಾರೆ.
3/ 7
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಕನ್ನಡ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಧನುಶ್ರೀ ಅವರದ್ದಾಗಿತ್ತು. ಸಿನಿಮಾ ಆಫರ್ ಸಿಕ್ಕ ಖುಷಿಯ ಸಂಘತಿಯನ್ನು ಸಾಮಾಜಿಕ ಜಾಲಯತಾಣದಲ್ಲಿ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದರು.
4/ 7
ಈಗ ಇದೇ ಧನುಶ್ರೀ ಹೊಸ ಕಾರು ಖರೀದಿಸಿರುವ ಖುಷಿಯಲ್ಲಿದ್ದಾರೆ. ಹೌದು, ಧನುಶ್ರೀ ಅವರು ತಮ್ಮ ಹೊಸ ಕಾರಿನ ಜೊತೆಗೆ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಅವುಗಳನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ.
5/ 7
ಹೊಸ ಕಾರನ್ನು ಖರೀದಿಸಿರುವ ಧನುಶ್ರೀ, ಇದು ಕಷ್ಟಪಟ್ಟಿದ್ದರ ಪ್ರತಿಫಲ ಎಂದೂ ಬರೆದುಕೊಂಡಿದ್ದಾರೆ. ಅಭಿಮಾನಿಗಳೂ ಸಹ ಧನುಶ್ರೀ ಅವರಿಗೆ ಸಂತೋಷದಿಂದ ಕಮೆಂಟ್ ಮಾಡುತ್ತಿದ್ದಾರೆ.
6/ 7
ಬಿಗ್ ಬಾಸ್ ಮನೆಯಿಂದ ಹೊರ ಬರುವ ಮುನ್ನ ಧನುಶ್ರೀ ಅವರ ಮೇಕಪ್ ವಿಷಯ ತುಂಬಾ ಚರ್ಚೆಗೆ ಬಂದಿತ್ತು. ಹೌದು, ಬಿಗ್ ಬಾಸ್ ಮನೆಯಲ್ಲಿ ಧನುಶ್ರೀ ಸ್ನಾನ ಮಾಡಲು ಹೋಗುವ ಮುನ್ನವೇ ಮುಖಕ್ಕೆ ಮೇಕಪ್ ಮಾಡಿಕೊಂಡು ಹೋಗುತ್ತಿದ್ದರು.
7/ 7
ಈ ಮೇಕಪ್ ವಿಷಯ ಕಿಚ್ಚನ ಜೊತೆ ವೇದಿಕೆ ಹಂಚಿಕೊಂಡಾಗ ಚರ್ಚೆಗೆ ಬಂದಿತ್ತು. ಆಗಲೂ ಸಹ ಧನುಶ್ರೀ ಮೇಕಪ್ ನನಗೆ ಆತ್ಮವಿಶ್ವಾಸ ತುಂಬುತ್ತದೆ ಎಂದಿದ್ದರು. ನಂತರದಲ್ಲಿ ಅವರು ಕೊಟ್ಟಿದ್ದ ಸಂದಶನಗಳಲ್ಲಿ ಮೇಕಪ್ ವಿಷಯದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಮಾತನಾಡಿಕೊಂಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿಕೊಂಡಿದ್ದರು.