ಕನ್ನಡ ಬಿಗ್ ಬಾಸ್ ಸೀಸನ್ 9ರಲ್ಲಿ ಫೈನಲ್ಗೆ ತಲುಪಿದ ನಟಿ ದೀಪಿಕಾ ದಾಸ್ ಅವರು ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಅವರು ಈ ವರ್ಷ ಮದುವೆಯಾಗ್ತಾರೆ ಅಂತಿದ್ದಾರೆ ನೆಟ್ಟಿಗರು.
2/ 7
ಬಿಗ್ಬಾಸ್ ರನ್ನರ್ ಅಪ್ ಆಗಿ ಹೊತರಹೊಮ್ಮಿದ ದೀಪಿಕಾ ದಾಸ್ ಕೊನೆತನಕ ಫೈಟ್ ನೀಡಿದ್ದರು. ಅವರು ಕಪ್ ಗೆಲ್ಲಲು ಸಾಧ್ಯವಾಗದಿದ್ದರೂ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ.
3/ 7
ದೀಪಿಕಾ ದಾಸ್ ಅವರು ಎಲಿಮಿನೇಟ್ ಆಗಿದ್ದಾರೆ. ವೇದಿಕೆಯಲ್ಲಿ ಅವರು ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಈವರೆಗೂ ಕನ್ನಡದಲ್ಲಿ ಲೇಡಿ ಕಂಟೆಸ್ಟೆಂಟ್ ಕಪ್ ಗೆದ್ದಿದ್ದು ಒಂದೆ ಸಲ. ನಾನು ಎರಡನೆಯವಳಾಗಬೇಕು ಎಂದಿದ್ದರು.
4/ 7
ದೀಪಿಕಾ ಅವರು ಈಗ ಹಲವು ಸಂದರ್ಶನದಲ್ಲಿ ಮಾತನಾಡುತ್ತಿದ್ದಾರೆ. ಸಂಬರಗಿ ಹಾಗೂ ಅರುಣ್ ಸಾಗರ್ ಅಣ್ಣನ ಸ್ಥಾನದಲ್ಲಿ ನಿಂತು ದೀಪಿಕಾಗೆ ಗಂಡು ಹುಡುಕೋ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅವರ ಪ್ರೀತಿಗೆ ನಾನು ಖುಷಿ ಪಡುತ್ತೇನೆ. ಖಂಡಿತಾ ಮದುವೆಯಾಗುತ್ತೇನೆ ಎಂದು ಮ್ಯಾರೆಜ್ ಹಿಂಟ್ ಕೊಟ್ಟಿದ್ದಾರೆ ದೀಪಿಕಾ.
5/ 7
ಇನ್ನೂ ನಾಲ್ಕು ವರ್ಷ ಬೇಕು. ಮದುವೆಯಾಗಲು ಇಷ್ಟವಾಗೋ ಹುಡುಗ ಬೇಕು. ಆ ಹುಡುಗ ಸುಳ್ಳು ಹೇಳಬಾರದು. ಒಳ್ಳೆ ಮನಸಿರಬೇಕು ಎಂದಿದ್ದಾರೆ.
6/ 7
ಅವರಿಗೆ ಟ್ರಿಪ್ ಹೋಗುವ ಮನಸಿರಬೇಕು. ಯಾವಾಗಲೂ ನನ್ನ ಜೊತೆ ಟ್ರಿಪ್ ಮಾಡಲು ಸಿದ್ಧರಿರಬೇಕು ಎಂದಿದ್ದಾರೆ. ಅಂತೂ ಮದುವೆಯಾದ ನಂತರ ಶೈನ್ ಶೆಟ್ಟಿ ನಮ್ಮ ಕೈಗೆ ಸಿಗಲ್ಲ, ಸುತ್ತಾಡೋಕಿರುತ್ತಲ್ಲ ಅಂತ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
7/ 7
ಅದೇನೇ ಇದ್ರೂ ಈ ಜೋಡಿಯ ಮದುವೆ ನೋಡೋಕೆ ಕಿರುತೆರೆ ಅಭಿಮಾನಿಗಳು ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.