BBK 8 Manju Pavagada: ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಅಪ್ಪ-ಅಮ್ಮನ ಹೆಸರು ಹೇಳದ ಬಗ್ಗೆ ಮಂಜು ಹೇಳಿದ್ದು ಹೀಗೆ..!
Bigg Boss Kannada Season 8 Winner Manju: ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಅವರು ವಿರುದ್ಧ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಫಿ ಗೆದ್ದ ದಿನ ಫಿನಾಲೆ ವೇದಿಕೆ ಮೇಲೆ ತಮ್ಮ ಅಮ್ಮ-ಅಮ್ಮನ ಹೆಸರು ಏಕೆ ಒಮ್ಮೆಯೂ ತೆಗೆದುಕೊಳ್ಳಲಿಲ್ಲ ಎಂದು ಕೆಲವು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆಗೆ ಈಗ ಮಂಜು ಪಾವಗಡ ಉತ್ತರಿಸಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಅವರು ಮೇಲೆ ಕೆಲವರು ಆರೋಪ ಒಂದನ್ನು ಮಾಡುತ್ತಿದ್ದಾರೆ.
2/ 10
ಟ್ರೋಫಿ ಗೆದ್ದ ಖುಷಿಯಲ್ಲಿರುವ ಮಂಜು ಅವರು ಫಿನಾಲೆ ವೇದಿಕೆ ಮೇಲೆ ಒಮ್ಮೆಯೂ ಅಪ್ಪ-ಅಮ್ಮನ ಹೆಸರು ತೆಗೆದುಕೊಂಡಿಲ್ಲ ಏಕೆ ಎಂದು ಕೆಲ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
3/ 10
ಹೆತ್ತು-ಹೊತ್ತು ಇಷ್ಟು ದೊಡ್ಡವನನ್ನಾಗಿ ಮಾಡಿದ ಪೋಷಕರ ಹೆಸರನ್ನೇ ಮರೆತರಾ ಮಂಜು ಎಂಬ ಆರೋಪ ಕೇಳಿ ಬರುತ್ತಿದೆ.
4/ 10
ಈ ಆರೋಪಕ್ಕೆ ಸಂಬಂಧಿಸಿದಂತೆ ಮಂಜು ಪಾವಗಡ ಅವರು ನ್ಯೂಸ್ 18 ಫೇಸ್ ಬುಕ್ ಲೈವ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
5/ 10
ಮೊದಲಿನಿಂದಲೂ ನನಗೆ ಅಪ್ಪ-ಅಮ್ಮನ ಜತೆ ಮಾತುಕತೆ ಕಡಿಮೆ ಎಂದಿದ್ದಾರೆ ಮಂಜು.
6/ 10
ಯಾವ ವಿಷಯವನ್ನೂ ನಾನು ಅವರ ಬಳಿ ಹಂಚಿಕೊಳ್ಳೋದಿಲ್ಲ. ನಮ್ಮ ಮಾತುಕತೆ ಕಣ್ಣಲ್ಲೇ ನಡೆದು ಹೋಗುತ್ತೆ ಎಂದಿದ್ದಾರೆ ಮಂಜು.
7/ 10
ಮಕ್ಕಳು ಏನೇ ಒಳ್ಳೆಯ ಕೆಲಸ ಮಾಡಿದರೂ ಅಪ್ಪ-ಅಮ್ಮನಿಗೆ ಖುಷಿಯಾಗುತ್ತೆ. ಅವರ ಖುಷಿ ಕಣ್ಣಲಿ ವ್ಯಕ್ತವಾಗುತ್ತೆ. ನನ್ನನ್ನು ಒಮ್ಮೆ ಖುಷಿ ತುಂಬಿದ ಕಣ್ಣುಗಳಿಂದ ನೋಡುತ್ತಾರೆ ಎಂದಿದ್ದಾರೆ ಮಂಜು ಪಾವಗಡ.
8/ 10
ಅಪ್ಪ-ಅಮ್ಮನ ಹೆಸರು ವೇದಿಕೆ ಮೇಲೆ ಹೇಳದ ಮಂಜು ತನ್ನ ಗೆಲುವಿಗೆ ಕಾರಣ ಅರವಿಂದ್, ಮಜಾ ಭಾರದ ಸ್ನೇಹಿತರು ಎಂದಿದ್ದರು ಮಂಜು.
9/ 10
ಬಿಗ್ ಬಾಸ್ ಗೆದ್ದ ನಂತರ ಸಿಕ್ಕಿರುವ ಹಣವನ್ನು ಏನು ಮಾಡಬೇಕೆಂದು ಇನ್ನೂ ಗೊತ್ತಿಲ್ಲವಂತೆ ಅವರಿಗೆ.
10/ 10
ಇನ್ನು ಇದೇ ವರ್ಷ ಹುಡುಗಿ ಸಿಕ್ಕರೆ ಮದುವೆ ಆಗೋದು ಗ್ಯಾರಂಟಿ ಅಂತಲೂ ಹೇಳಿದ್ದಾರೆ.