ಬಿಗ್ ಬಾಸ್ ಕನ್ನಡ ಸೀಸನ್ 8 ವಿನ್ನರ್ ಮಂಜು ಪಾವಗಡ ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವ ಕಾಲ ಈಗ. ಸಾಲು ಸಾಲು ಹೊಸ ಪ್ರಾಜೆಕ್ಟ್ಗಳಲ್ಲಿ ನಟಿಸುತ್ತಿರುವ ಮಂಜು ಪಾವಗಡ ಅವರಿಗೆ ಈಗ ಮತ್ತೊಂದು ಆಫರ್ ಸಿಕ್ಕಿದೆ. (ಚಿತ್ರಗಳು ಕೃಪೆ: ಮಂಜು ಪಾವಗಡ ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಹಾಸ್ಯದ ಹೊಳೆ ಹರಿಸಿದ್ದ ಮಂಜುನ ಪಾವಗಡ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಹಾಸ್ಯ ಕಲಾವಿದ ಮಂಜು ಅವರಿಗೆ ಒಳ್ಳೆಯ ಆಫರ್ಗಳು ಅರಸಿ ಬರುತ್ತಿವೆ.
2/ 7
ಇತ್ತೀಚೆಗಷ್ಟೆ ಮಂಜು ಪಾವಗಡ ಅವರು ತಮ್ಮ ಹೊಸ ಸಿನಿಮಾ ಕುರಿತಾಗಿ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದರು. ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ನಟ ರಾಜೀವ್ ಹನು ನಾಯಕನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಮಂಜು ಪಾವಗಡ ಸಹ ಅಭಿನಯಿಸುತ್ತಿದ್ದಾರೆ.
3/ 7
ರಾಜೀವ್ ಹನು ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಉಸಿರೇ ಉಸಿರೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಮಂಜು ಪಾವಗಡ ಅವರೂ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
4/ 7
ಈಗ ಮಂಜು ಪಾವಗಡ ಅವರಿಗೆ ನಾ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಡಿನಲ್ಲಿ ನಟಿಸು ಅವಕಾಶ ಸಿಕ್ಕಿದೆ. ಹೌದು, ಸಂಗೀತ ರಾಜೀವ್ ಅವರ ಈ ಹಾಡಿನಲ್ಲಿ ಮಂಜು ಹೆಜ್ಜೆ ಹಾಕಲಿದ್ದಾರೆ.
5/ 7
ಈ ಖುಷಿಯಾದ ವಿಷಯವನ್ನು ಮಂಜು ಪಾವಗಡ ಹಾಗೂ ಸಂಗೀತಾ ರಾಜೀವ್ ಅವರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಂಜು ಅವರ ಅಭಿಮಾನಿಗಳು ನಟನಿಗೆ ಶುಭ ಕೋರುತ್ತಿದ್ದಾರೆ.
6/ 7
ನಾ ಮುಟ್ಟಿದ್ದೆಲ್ಲ ಚಿನ್ನ... ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ನನ್ನ ಆತ್ಮೀಯ ಗೆಳೆಯ ಮಂಜು ಪಾವಗಡ ಅವರ ಸಹಭಾಗಿತ್ವವೂ ಇದೆ. ನನ್ನ ಜೊತೆ ಈ ಹಾಡಿನಲ್ಲಿ ಅವರು ಕೂಡ ನಟಿಸಲಿದ್ದಾರೆ ಎಂದೂ ಸಂಗೀತಾ ಅವರು ಪೋಸ್ಟ್ ಮಾಡಿದ್ದಾರೆ.
7/ 7
ಇನ್ನು ಮಂಜು ಪಾವಗಡ ಅವರು ತಮ್ಮೊಂದಿಗೆ ಬಿಗ್ ಬಾಸ್ ಮನೆಯಲ್ಲಿದ್ದ ಸಹ ಸ್ಪರ್ಧಿಗಳನ್ನು ಆಗಾಗ ಭೇಟಿ ಮಾಡುತ್ತಾ, ಅವರ ಜತೆಗೆ ಕಳೆದ ಕ್ಷಣಗಳನ್ನು ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದಾರೆ.