Bigg Boss: ಅವಳು ದೊಡ್ಡ ಫಿಗರ್ ಆದ್ರೆ ನಾನು ಅಷ್ಟೆ ಎಂದ ಅರವಿಂದ್: ತರಾಟೆಗೆ ತೆಗೆದುಕೊಂಡ ನಿಧಿ ಸುಬ್ಬಯ್ಯ..!
ಬೈಕರ್ ಅರವಿಂದ್ ಹಾಗೂ ನಟಿ ನಿಧಿ ಸುಬ್ಬಯ್ಯ ಅವರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದೆ. ನಿಧಿ ಕುರಿತಾಗಿ ಮಾತು ಜಾರಿದ ಅರವಿಂದ್ ಮತ್ತೆ ಕ್ಷಮೆ ಕೇಳಲು ಹೋಗಿದ್ದಾರೆ. ಪ್ರತಿ ಸಲ ಅವಮಾನ ಮಾಡುವ ಮಾತನ್ನು ಆಡಿ ಕ್ಷಮೆ ಕೇಳುವ ಅರವಿಂದ್ ಬಗ್ಗೆ ನಿಧಿ ಬೇಸರ ವ್ಯಕ್ತಪಡಿಸುವುದರ ಜೊತೆಗೆ ಅರವಿಂದ್ ನಿಜವಾದ ಕ್ರೀಡಾಪಟುವಲ್ಲ ಎಂದಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಟಾಸ್ಕ್ ಆಡುವಾಗ ಈ ಹಿಂದೆಯೂ ಒಮ್ಮೆ ನಿಧಿ ಹಾಗೂ ಅರವಿಂದ್ ಕೆಪಿ ಅವರ ನಡುವೆ ಜಗಳವಾಗಿತ್ತು.
2/ 9
ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಅವರ ನಡುವೆ ಮತ್ತೆ ಟಾಸ್ಕ್ ನಡೆಯುವಾಗ ಮಾತಿನ ಚಕಮಕಿ ನಡೆದಿದೆ.
3/ 9
ಅರವಿಂದ್, ನಿಧಿ ಸುಬ್ಬಯ್ಯ ಅವರ ಬಗ್ಗೆ ಬಳಸಿದ ಒಂದು ಪದ ನಿಧಿ ಅವರಿಗೆ ಸಿಟ್ಟು ತರಿಸಿದೆ.
4/ 9
ಅರವಿಂದ್ ಅವರು ಮಾತು ಜಾರಿದ ಕಾರಣಕ್ಕೆ ನಿಧಿ ಬಳಿ ಬಂದು ಕ್ಷಮೆ ಕೇಳಿದ್ದಾರೆ.
5/ 9
ಪ್ರತಿ ಸಲ ಮಾತು ಜಾರಿ ನಂತರ ಬಂದು ಕ್ಷಮೆ ಕೇಳುತ್ತೀಯಾ ಎಂದು ಅರವಿಂದ್ ಅವರನ್ನು ನಿಧಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
6/ 9
ಅದಕ್ಕೆ ನಿಧಿ ಸುಬ್ಬಯ್ಯ ನೀನು ನಿಜವಾದ ಕ್ರೀಡಾಪಟುವಲ್ಲ. ನೀನು ಒಬ್ಬ ಲೂಸರ್. ನಿನಗೆ ಕ್ರೀಡಾ ಸ್ಪೂತಿ ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
7/ 9
ಈ ಘಟನೆಯ ಬಗ್ಗೆ ಅರವಿಂದ್ ಬಳಿ ಮಾತನಾಡಲು ಹೋದ ಶುಭಾ ಪೂಂಜಾ ಅವರಿಗೆ ಅರವಿಂದ್, ಅವಳು ದೊಡ್ಡ ಫಿಗರ್ ಆದರೆ ನಾನು ಅಷ್ಟೆ ಎಂದು ನಿಧಿ ಬಗ್ಗೆ ಮತ್ತೆ ಖಾರವಾಗಿ ಕಮೆಂಟ್ ಮಾಡಿದ್ದಾರೆ.
8/ 9
ನಾನು ಒಮ್ಮೆ ಕ್ಷಮೆ ಕೇಳಿದರೆ ಅದು ಮನಸ್ಸಿನಿಂದ. ಟಾಸ್ಕ್ ನಡೆಯುವಾಗ ನಿಧಿ ಜೊತೆ ಅರವಿಂದ್ ಮಾತನಾಡಿದ್ದು ಸರಿಯಾದ ಕ್ರಮವಲ್ಲ ಎಂದು ಶುಭ ಹೇಳಿದಾಗ, ಜೋರಾಗಿ ಕ್ಯಾಪ್ಟನ್ ಜತೆ ಮಾತುಕತೆ ನಡೆಯುವಾ ಆ ಪದ ಬಳಸಿದ್ದರಲ್ಲಿ ತಪ್ಪೇನಿದೆ ಎಂದಿದ್ದಾರೆ.
9/ 9
ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂದು ನಿಧಿ ಸ್ನೇಹಿತೆ ಶುಭಾ ಅವರಿಗೆ ಹಾಗೆ ಮಾಡದಂತೆ ಮನವಿ ಮಾಡಿದ್ದಾರೆ. ಪದೇ ಪದೇ ತಪ್ಪು ಮಾಡುವ ವ್ಯಕ್ತಿಗಳು ನನ್ನ ಎದುರು ಇದ್ದರೂ ಇಲ್ಲದಂತೆ ಎಂದಿದ್ದಾರೆ.