Bro Gowda: ಬಿಗ್ ಬಾಸ್ ಮನೆಯಲ್ಲಿ ಲವ್ ಮಾಡೋದ್ರಲ್ಲೇ ಬ್ಯುಸಿಯಾದ್ರಾ ಬ್ರೋ ಗೌಡ..!
Bigg Boss 8: ಬ್ರೋ ಗೌಡ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಕೇವಲ ಪ್ರೀತಿ-ಪ್ರೇಮದ ವಿಷಯದಿಂದ ಮಾತ್ರ ಸದ್ದು ಮಾಡುತ್ತಿದ್ದಾರೆ. ಯಾವುದೇ ಟಾಸ್ಕ್ನಲ್ಲಿ ಅವರ ಹೆಸರೇ ಕೇಳಿಸುತ್ತಿಲ್ಲ. ಅಲ್ಲದೆ ಶಮಂತ್ ಸ್ವಾರ್ಥದಿಂದಾಗಿ ಮನೆಯವರು ಬ್ರೋ ಗೌಡನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ಶಮಂತ್ ಯಾವಾಗ ಮಾತನಾಡಿದರೂ ಬರೀ ಲವ್ ವಿಷಯವಾಗಿಯೇ ಮಾತನಾಡುತ್ತಿರುತ್ತಾರೆ. ಅದಕ್ಕೆ ಮನೆಯ ಇತರೆ ಸದಸ್ಯರಿಗೆ ಬ್ರೋ ಗೌಡ ಬಿಗ್ ಬಾಸ್ ಮನೆಗೆ ಲವ್ ಮಾಡೋದಕ್ಕೆ ಬಂದಿದ್ದಾರೆ ಎಂದೆನಿಸಲು ಆರಂಭವಾಗಿದೆ. (ಚಿತ್ರಗಳು ಕೃಪೆ: ಬ್ರೋ ಗೌಡ ಇನ್ಸ್ಟಾಗ್ರಾಂ ಖಾತೆ)
ಬ್ರೋ ಗೌಡ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಲವರ್ ಬಾಯ್ ಎಂಟ್ರಿಯಾಯ್ತು ಅಂದುಕೊಂಡರು.
2/ 12
ಆದರೆ ಶಮಂತ್ ಅನ್ನು ಲವರ್ ಬಾಯ್ ಎಂದುಕೊಂಡಿದ್ದೊಂದೇ ಬಂತು ಅವರಿಗೆ ಹುಡುಗಿ ಹೋಗಲಿ ಒಂದು ನೋಣ ಸಹ ಬೀಳಲಿಲ್ಲ ಅಂತ ಮನೆಯವ ಸದಸ್ಯರು ಆಡಿಕೊಳ್ಳುವಂತಾಗಿದೆ.
3/ 12
ಮನೆಗೆ ಎಂಟ್ರಿಯಾಗುತ್ತಿದ್ದಂತೆಯೇ ದಿವ್ಯಾ ಸುರೇಶ್ ಮೇಲೆ ಕ್ರಶ್ ಆಗಿತ್ತು ಈ ಶಮಂತ್ ಅವರಿಗೆ.
4/ 12
ಆದರೆ ದಿವ್ಯಾ ಇವರತ್ತ ತಿರುಗಿಯೂ ನೋಡಲಿಲ್ಲ. ಬದಲಿಗೆ ಈ ವಿಷಯವನ್ನು ಸುದೀಪ್ ವಾರದ ಕತೆಯಲ್ಲಿ ಬಹಿರಂಗೊಳಿಸಿದ್ರು.
5/ 12
ನಂತರ ಬ್ರೋ ಗೌಡ ಕಣ್ಣು ದಿವ್ಯಾ ಉರುಡುಗ ಕಡೆ ತಿರುಗಿತ್ತು.
6/ 12
ಅಲ್ಲೂ ಸಹ ಫಲಿತಾಂಶ ಸಕಾರಾತ್ಮಕವಾಗಿರಲಿಲ್ಲ.
7/ 12
ಕಳಪೆ ಪ್ರದರ್ಶನದ ವಿಷಯ ಬಂದಾಗ ಬ್ರೋ ಗೌಡ ಬಿಗ್ ಬಾಸ್ ಮನೆಗೆ ಪ್ರೀತಿ ಮಾಡೋಕೆ ಬಂದಿದ್ದಾರಾ..? ಜನರ ಪ್ರೀತಿ ಗಳಿಸೋಕೆ ಬಂದಿದ್ದಾರಾ ಅನ್ನೋದು ತಿಳಿಯುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು.
8/ 12
ಇಷ್ಟೆಲ್ಲ ಆದರೂ, ಶಮಂತ್ ಈಗಲೂ ಸಹ ಅವಕಾಶ ಸಿಕ್ಕರೆ ಸಾಕು ಎಲ್ಲಿ ಹುಡುಗಿಯರು ಇರುತ್ತಾರೋ ಅಲ್ಲೇ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಳ್ಳುತ್ತಾ ಇಂಪ್ರೆಸ್ ಮಾಡೋಕೆ ಶುರು ಮಾಡುತ್ತಾರೆ.
9/ 12
ಅದಕ್ಕೆ ಸ್ಪರ್ಧಿ ಗೀತಾ ಭಟ್ ಇದು ಬಿಗ್ ಬಾಸಾ ಅಥವಾ ಲವ್ ಬಾಸಾ ಅಂತ ಶಮಂತ್ಗೆ ನೇರವಾಗಿಯೇ ಪ್ರಶ್ನಿಸಿದ್ದರು.
10/ 12
ಅದಕ್ಕೆ ಉತ್ತರಿಸಿದ್ದ ಶಮಂತ್ ಇಲ್ಲಿ ಲವ್ ಮಾಡುವಷ್ಟು ಸಮಯ ಇಲ್ಲ. ಏನಿದ್ದರೂ ಇಂಪ್ರೆಸ್ ಮಾಡಲು ಪ್ರಯತ್ನಿಸಬಹುದಷ್ಟೆ ಎಂದಿದ್ದರು.
11/ 12
ಬ್ರೋ ಗೌಡ ಮಾತ್ರ ಪಟ್ಟು ಬಿಡದೆ ದಿವ್ಯಾ ಉರುಡುಗ ಅವರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿದ್ದಾರೆ.
12/ 12
ಆದರೆ ದಿವ್ಯಾ ಉರುಡುಗ ಹಾಗೂ ಬೈಕರ್ ಅರವಿಂದ್ ನಡುವಿನ ಆತ್ಮೀಯತೆ ದಿನೇ ದಿನೇ ಗಾಢವಾಗುತ್ತಿದೆ.