Bigg Boss Kannada 7 Elimination: ಬಿಗ್ ಬಾಸ್ನಲ್ಲಿ ಬಿಗ್ ಟ್ವಿಸ್ಟ್: ಈ ವಾರ ಮನೆಯಿಂದ ಹೊರಬಂದ 2ನೇ ಸ್ಪರ್ಧಿ ಇವರೇ ನೋಡಿ
Bigg Boss Kannada 7 Elimination: ಅದರಂತೆ ಭರ್ಜರಿ ಪೈಪೋಟಿಯಿಂದ ಕೂಡಿದ್ದ ಟಾಸ್ಕ್ನಲ್ಲಿ ಶೈನ್ ಶೆಟ್ಟಿ ಗೆದ್ದು ಬೀಗಿದ್ದಾರೆ. ಈ ಮೂಲಕ ಈ ವಾರ ಎಲಿಮಿನೇಷನ್ನಿಂದ ಇಮ್ಯುನಿಟಿ ಪಡೆದಿದ್ದರು.
ಬಿಗ್ ಬಾಸ್ ಸೀಸನ್ 7, 14ನೇ ವಾರಾಂತ್ಯಕ್ಕೆ ಬಂದು ನಿಂತಿದೆ. ಇನ್ನು ಕೇವಲ ಎರಡು ವಾರಗಳು ಮಾತ್ರ ಉಳಿದಿದ್ದು, ಯಾರು ಫಿನಾಲೆಗೆ ಏರಲಿದ್ದಾರೆಂಬ ಕುತೂಹಲ ವೀಕ್ಷಕರಲ್ಲಿದೆ.
2/ 21
ಇನ್ನು ಬಿಗ್ ಬಾಸ್ ತಿಳಿಸಿದಂತೆ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದವರನ್ನು ಹೊರತುಪಡಿಸಿ ಉಳಿದವರೆಲ್ಲ ನಾಮಿನೇಟ್ ಆಗಿದ್ದರು.
3/ 21
ಅದರಂತೆ ಭರ್ಜರಿ ಪೈಪೋಟಿಯಿಂದ ಕೂಡಿದ್ದ ಟಾಸ್ಕ್ನಲ್ಲಿ ಶೈನ್ ಶೆಟ್ಟಿ ಗೆದ್ದು ಬೀಗಿದ್ದರು. ಈ ಮೂಲಕ ಈ ವಾರ ಎಲಿಮಿನೇಷನ್ನಿಂದ ಇಮ್ಯುನಿಟಿ ಪಡೆದು ಸೇಫ್ ಆಗಿದ್ದರು.
4/ 21
ಇನ್ನು ಈ ವಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಿದ್ದು, ಲಕ್ಷುರಿ ಟಾಸ್ಕ್ಗಳ ಮೂಲಕ ಪಾಯಿಂಟ್ ಕಲೆಹಾಕಲಿದೆ.
5/ 21
ಹರೀಶ್ ರಾಜ್ ನಾಯಕತ್ವದ ಗರುಡ ತಂಡ ಮತ್ತು ವಾಸುಕಿ ವೈಭವ್ ನೇತೃತ್ವದ ಡಮರುಗ ತೀವ್ರ ಪೈಪೋಟಿ ನೀಡಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
6/ 21
ಕಳೆದ ವಾರ ಯಾವುದೇ ನಾಮಿನೇಷನ್ ಇಲ್ಲದಿದ್ದ ಕಾರಣ ಈ ವಾರ ಡಬಲ್ ನಾಮಿನೇಷನ್ ಇತ್ತು. ಹೀಗಾಗಿ ಸ್ಪರ್ಧಿಗಳಲ್ಲೂ ತೀವ್ರ ಪೈಪೋಟಿ ನಿರ್ಮಾಣವಾಗಿತ್ತು.
7/ 21
8 ಸ್ಪರ್ಧಿಗಳಲ್ಲಿ ಈ ವಾರ ಹೊರಹೋಗಲಿದ್ದಾರೆ, ಯಾರು ಉಳಿಯಲಿದ್ದಾರೆ ಎಂಬ ಕುತೂಹಲಕ್ಕೆ ಕಿಚ್ಚು ಹಚ್ಚುವಂತೆ ಟಾಸ್ಕ್ಗಳನ್ನು ನೀಡುವ ಮೂಲಕ ಬಿಗ್ ಬಾಸ್ ಆಯೋಜಕರು ವೀಕ್ಷಕರನ್ನು ಸೆಳೆದಿದ್ದರು.
8/ 21
ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳ ಲೀಸ್ಟ್ವೊಂದು ಬಿಗ್ ಬಾಸ್ ಮೂಲಗಳಿಂದ ಲಭ್ಯವಾಗಿದೆ. ಅದರಂತೆ ಈ ವಾರ ಬಿಗ್ ಬಾಸ್ನಲ್ಲಿ ಯಾರು ಸೇಫ್ ಆಗಿದ್ದಾರೆ. ಯಾರು ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಕುತೂಹಲಕ್ಕೆ ತೆರೆಬಿದ್ದಿದೆ.
9/ 21
ಈ ವಾರದ ಎಲಿಮಿನೇಷನ್ನಲ್ಲಿ ಕುರಿ ಪ್ರತಾಪ್ ಮೊದಲು ಸೇಫ್ ಆಗಿದ್ದರು.
10/ 21
ಆ ಬಳಿಕ ಕಿಚ್ಚ ಸುದೀಪ್ ಕಿನ್ನರಿ ಬೆಡಗಿ ಭೂಮಿ ಶೆಟ್ಟಿ ಸೇಫ್ ಅಂದರು.
11/ 21
ಇನ್ನು ವಾಸುಕಿ ವೈಭವ್ ಮೂರನೇ ಸೇಫ್ ಆಗುವ ಮೂಲಕ ನಿಟ್ಟುಸಿರು ಬಿಟ್ಟರು.
12/ 21
ಇನ್ನು ಈ ವಾರ ಉತ್ತಮ ಪ್ರದರ್ಶನ ನೀಡಿದ ಪ್ರಿಯಾಂಕಾ ಕೂಡ ಸೇಫ್ ಆದರು.
13/ 21
ಹಾಗೆಯೇ ಭಾನುವಾರದ ಎಲಿಮಿನೇಷನ್ ರೌಂಡ್ನಲ್ಲಿ ಹರೀಶ್ ರಾಜ್ ಹೆಸರಿತ್ತು.
14/ 21
ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಗಾಯಗೊಂಡಿರುವ ದೀಪಿಕಾ ಕೂಡ ಡೇಂಜರ್ ಝೋನ್ನಲ್ಲಿದ್ದರು.
15/ 21
ಇನ್ನು ಚಂದನ್ ಆಚಾರ್ ಕೂಡ ಭಾನುವಾರದ ಎಲಿಮಿನೇಷನ್ ಸ್ಪರ್ಧಿಗಳ ಪಟ್ಟಿಯಲ್ಲಿದ್ದರು.
16/ 21
ಶನಿವಾರ ನಡೆದ ಎಲಿಮಿನೇಷನ್ನಲ್ಲಿ ಈ ವಾರ ಕಳಪೆ ಪ್ರದರ್ಶನ ನೀಡಿರುವ ಕಿಶನ್ ಔಟ್ ಆಗಿದ್ದರು.
17/ 21
ಇನ್ನು ಡಬಲ್ ಎಲಿಮಿನೇಷನ್ ವೀಕ್ನ ಎರಡನೇ ಎಲಿಮಿನೇಟ್ ಸ್ಪರ್ಧಿ ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ.
18/ 21
ಡೇಂಜರ್ ಝೋನ್ನಲ್ಲಿದ್ದ ಹರೀಶ್ ರಾಜ್, ದೀಪಿಕಾ, ಚಂದನ್ ಆಚಾರ್ ಇವರಲ್ಲಿ ಒಬ್ಬರು ಹೊರಬಿದ್ದಿದ್ದಾರೆ. ಅವರೆಂದರೇ...
19/ 21
ಚಂದನ್ ಆಚಾರ್
20/ 21
ಹೌದು, ಬಿಗ್ ಬಾಸ್ ಸೀಸನ್ 7ನಿಂದ ಚಂದನ್ ಆಚಾರ್ ಹೊರಬಿದ್ದಿದ್ದಾರೆ. ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಜೊತೆ ಚಂದನ್ ವೇದಿಕೆ ಹಂಚಿಕೊಳ್ಳಲಿದ್ದಾರೆ.
21/ 21
ಅಲ್ಲಿಗೆ ಬಿಗ್ ಬಾಸ್ ಮನೆಯಲ್ಲಿ ನೇರ ನಡೆ ನುಡಿಗಳಿಂದ ಜನಪ್ರಿಯರಾಗಿದ್ದ ಚಂದನ್ ಆಚಾರ್ ಅವರ ಬಿಗ್ ಬಾಸ್ ಜರ್ನಿ ಅಂತ್ಯವಾಗಿದೆ.