ನೆಹರು ಬಗ್ಗೆ ವಿವಾದಿತ ಹೇಳಿಕೆ ನೀಡಿದ ‘ಬಿಗ್ ಬಾಸ್‘ ಸ್ಪರ್ಧಿ ಅರೆಸ್ಟ್!
ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ಜವಾಹರಲಾಲ್ ನೆಹರುಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಡಿಯೋವನ್ನು ಪೋಸ್ಟ್ ಮಾಡಿದಕ್ಕಾಗಿ ಪಾಯಲ್ ರೊಹ್ಟಗಿಗೆ ಡಿಸೆಂಬರ್ನಲ್ಲಿ ನೋಟೀಸ್ ನೀಡಲಾಗಿತ್ತು.
ಬಾಲಿವುಡ್ ನಟಿ ,ಬಿಗ್ ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೊಹ್ಟಗಿಯನ್ನು ಪೊಲೀಸರು ಬಂಧಿಸಿದ್ದಾರೆ.
2/ 7
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಪೊಲೀಸರು ಪಾಯಲ್ ರೊಹ್ಟಗಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
3/ 7
ಇನ್ನು ಈ ಬಗ್ಗೆ ನಟಿ ಪಾಯಲ್ ರೊಹ್ಟಗಿ ಟ್ವೀಟ್ ಮಾಡಿದ್ದು, ‘ನಾನು ಮೋತಿಲಾಲ್ ನೆಹರೂ ಕುರಿತಂತೆ ವಿಡಿಯೋ ಮಾಡಿದಕ್ಕಾಗಿ ರಾಜಸ್ಥಾನ ಪೊಲೀಸರು ನನನ್ನು ಬಂಧಿಸಿದ್ದಾರೆ.
4/ 7
ಈ ವಿಡಿಯೋ ಮಾಡಲು ನಾನು ಗೂಗಲ್, ಫ್ರೀಡಂ ಆಫ್ ಸ್ಪೀಚ್ ಇಸ್ ಅ ಜೋಕ್ನಿಂದ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ ಎಂದು ರೊಹ್ಟಗಿ ಟ್ವೀಟ್ ಮಾಡಿದ್ದಾರೆ.
5/ 7
ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ಜವಾಹರಲಾಲ್ ನೆಹರುಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಡಿಯೋವನ್ನು ಪೋಸ್ಟ್ ಮಾಡಿದಕ್ಕಾಗಿ ಪಾಯಲ್ ರೊಹ್ಟಗಿಗೆ ಡಿಸೆಂಬರ್ನಲ್ಲಿ ನೋಟೀಸ್ ನೀಡಲಾಗಿತ್ತು.
6/ 7
ಜವಾಹರಲಾಲ್ ನೆಹರು ಕುರಿತು ಪಾಯಲ್ ಆಕ್ಷೇಪಾರ್ಹ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚರ್ಮೆಶ್ ಶರ್ಮಾ ಅವರು ಈ ಕುರಿತು ದೂರು ದಾಖಲಿಸಿದ್ದರು.
7/ 7
ಕಾಂಗ್ರೆಸ್ ವಿರುದ್ಧ ಪೋಸ್ಟ್ ಮಾಡುವ ಪಾಯಲ್, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಪೊಲೀಸರು ಪಾಯಲ್ ಅವರಿಗೆ ಐದು ಬಾರಿ ನೋಟಿಸ್ ನೀಡಿದ್ದು, ಉತ್ತರಿಸದ್ದಕ್ಕೆ ಬಂಧಿಸಿದ್ದಾರೆ ಎನ್ನಲಾಗಿದೆ.