Pratham: ಇದ್ದಕ್ಕಿದ್ದಂತೆ ಇದ್ದ ಮನೆ ಖಾಲಿ ಮಾಡಿಕೊಂಡು ಬೆಂಗಳೂರು ಬಿಟ್ಟು ಹೊರಟ ಪ್ರಥಮ್..!
ಒಳ್ಳೆ ಹುಡುಗ ಎಂದೇ ಖ್ಯಾತರಾಗಿರುವ ಪ್ರಥಮ್ ಸದ್ಯ ಬೆಂಗಳೂರು ಬಿಟ್ಟು ಹೋಗಿದ್ದಾರೆ. ನಗರದಲ್ಲಿದ್ದ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಹೊರಟಿದ್ದಾರೆ. (ಚಿತ್ರಗಳು ಕೃಪೆ: ಪ್ರಥಮ್ ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ಮೂಲಕ ಮುನ್ನಲೆಗೆ ಬಂದ ಪ್ರತಿಭೆ ಪ್ರಥಮ್. ಸದ್ಯ ಬೆಂಗಳೂರು ಬಿಟ್ಟು ಹೋಗಿದ್ದಾರೆ.
2/ 9
ನಟಭಯಂಕರ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಥಮ್ ಸಿನಿಮಾ ಕೆಲಸಗಳಿದ್ದಾಗ ಬೆಂಗಳೂರಿಗೆ ಬರುವುದಾಗಿ ಹೇಳಿದ್ದಾರೆ.
3/ 9
ಈ ಹಿಂದೆ ಕೊರೋನಾ ಲಾಕ್ಡೌನ್ ಆರಂಭವಾದಾಗಲೂ ಪ್ರಥಮ್ ನಗರ ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.
4/ 9
ಹಸು-ಕುರಿ ಮೇಯಿಸುತ್ತಾ ಹಳ್ಳಿಯಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದರು.
5/ 9
ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿಗೆ ಮರಳಿದ್ದ ಪ್ರಥಮ್ ಈಗ, ತಾವಿದ್ದ ಬಾಡಿಗೆ ಮನೆ ಖಾಲಿ ಮಾಡಿಕೊಂಢು ಬೆಂಗಳೂರಿನಿಂದ ಹೊರಟಿದ್ದಾರೆ.
6/ 9
ಪ್ರಥಮ್ ಅವರು ತಾವು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿಲ್ಲ. ಆದರೆ ಹೆಸರು ತಂದುಕೊಟ್ಟ ಊರು ಹಾಗೂ 3 ವರ್ಷಗಳಿಂದ ಇದ್ದ ಮನೆ ಬಿಡುವಾಗ ಜಾಸ್ತಿನೇ ಬೇಸರ ಆಯ್ತು ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
7/ 9
ನಟಭಯಂಕರ ಸಿನಿಮಾದ ಕೆಲಸಗಳು ಬಾಕಿ ಇದ್ದು, ಅದಕ್ಕಾಗಿ ಆಗಾಗ ಬೆಂಗಳೂರಿಗೆ ಬರುವುದಾಗಿಯೂ ತಿಳಿಸಿದ್ದಾರೆ. ಇನ್ನು ಅವರ ಕಚೇರಿ ಬೆಂಗಳೂರಿನಲ್ಲಿದ್ದು, ಅಲ್ಲೇ ಅವರು ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರಂತೆ.
8/ 9
ಪ್ರಥಮ್ ಅವರಿಗೆ ಜೊತೆಗಿದ್ದ ಜನರಿಗಿಂತ ವಸ್ತುಗಳ ಜೊತೆಗೆ ಅಟ್ಯಾಚ್ಮೆಂಟ್ ಜಾಸ್ತಿ ಅಂತೆ. ಬಿಗ್ ಬಾಸ್ ಗೆದ್ದಾಗಲೂ ಸಹ ಆ ಮನೆ ಬಿಟ್ಟು ಬರುವಾಗ ತುಂಬಾ ಬೇಸರವಾಗಿತ್ತಂತೆ.
9/ 9
ಹೊಸ ಸಿನಿಮಾದ ಕೆಲಸಗಳು ಮನಡೆಯುತ್ತಿವೆಯಂತೆ. ಶೀಘ್ರದಲ್ಲೇ ಗುಡ್ ನ್ಯೂಸ್ ಜೊತೆ ಮತ್ತೆ ಮರಳುತ್ತೇನೆ ಎಂದು ಪ್ರಥಮ್ ಬೇಸರದಿಂದ ಪೋಸ್ಟ್ ಮಾಡಿದ್ದಾರೆ.