Bhoomi Shetty-Vardhan: 'ಕಿನ್ನರಿ' ಭೂಮಿ ಶೆಟ್ಟಿ ಚಿತ್ರದಲ್ಲೊಬ್ಬ ಖತರ್ನಾಕ್ ಪೊಲೀಸ್! ಕೆಂಡದ ಸೆರಗಲ್ಲಿ ವಿಲನ್ ಆದ ವರ್ಧನ್!
'ಬಿಗ್ ಬಾಸ್' ಖ್ಯಾತಿಯ ನಟಿ, 'ಕಿನ್ನರಿ' ಧಾರಾವಾಹಿಯ 'ಮಣಿ' ಪಾತ್ರಧಾರಿ ಭೂಮಿ ಶೆಟ್ಟಿ ಅಭಿನಯದ 'ಕೆಂಡದ ಸೆರಗು' ಚಿತ್ರದಲ್ಲಿ ಒಂದು ವಿಲನ್ ಪಾತ್ರ ಇದೆ. ಆ ಪಾತ್ರವನ್ನ ಕನ್ನಡದ ನವ ನಟ ವರ್ಧನ್ ನಿರ್ವಹಿಸಿದ್ದಾರೆ.
ಕನ್ನಡದ ಬಿಗ್ ಬಾಸ್ ಖ್ಯಾತಿಯ ನಟಿ ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರದಲ್ಲಿ ಒಂದು ವಿಲನ್ ಪಾತ್ರ ಇದೆ. ಆ ಪಾತ್ರವನ್ನ ಕನ್ನಡದ ನವ ನಟ ವರ್ಧನ್ ನಿರ್ವಹಿಸಿದ್ದಾರೆ.
2/ 6
ಕನ್ನಡದ ನಟ ವರ್ಧನ್ ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿಯೇ ಬೇಕಾಗೋ ತಯಾರಿಯನ್ನೂ ಮಾಡಿಕೊಂಡಿದ್ದಾರೆ.
3/ 6
ಚಿತ್ರದ ಪೊಲೀಸ್ ಪಾತ್ರಕ್ಕಾಗಿಯೇ ವರ್ಧನ್ ದಾಡಿ ಬಿಟ್ಟಿದ್ದಾರೆ. ಚಿತ್ರದಲ್ಲಿ ದಾಡಿ ಬಿಟ್ಟಿರೋ ಪೊಲೀಸ್ ವಿಲನ್ ಪಾತ್ರವನ್ನೆ ನಿರ್ವಹಿಸಿದ್ದಾರೆ.
4/ 6
ನಟ ವರ್ಧನ್ ಈಗಾಗಲೇ ಕನ್ನಡದ ಹತ್ತು ಹಲವು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಅವರೇ ಹೇಳುವಂತೆ, ಕೆಂಡದ ಸೆರಗು ಚಿತ್ರದ ಪೊಲೀಸ್ ಪಾತ್ರ ತೀರಾ ವಿಭಿನ್ನವಾಗಿಯೇ ಇದೆ. ಅದನ್ನ ಅಷ್ಟೇ ಅದ್ಭುತವಾಗಿಯೇ ನಿರ್ವಹಿಸಿರೋದಾಗಿ ವರ್ಧನ್ ಹೇಳಿಕೊಳ್ತಾರೆ.
5/ 6
ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ ಅವರೇ ಪ್ರಮುಖ ಪಾತ್ರವನ್ನ ಮಾಡಿದ್ದಾರೆ. ಆ ಪಾತ್ರದ ವಿರುದ್ಧವೇ ವರ್ಧನ್ ಇಲ್ಲಿ ಪೊಲೀಸ್ ಆಗಿಯೇ ಅಬ್ಬರಿಸಿದ್ದಾರೆ.
6/ 6
ರಾಕಿ ಸೋಮ್ಲಿ ಬರೆದಿರೋ ಕಾದಂಬರಿ ಆಧರಿಸಿರೋ ಈ ಚಿತ್ರವನ್ನ ಸ್ವತಃ ರಾಕಿ ಸೋಮ್ಲಿ ಡೈರೆಕ್ಷನ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ.