36 ಚೈನಾ ಟೌನ್ ಅಗ್ಲೊ ಔರ್ ಪಗ್ಲಿ, ಹೇ ಬೇಬಿ ಸೇರಿದಂತೆ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಪಾಯಲ್ ರೋಹಟ್ಗಿಯನ್ನು ಪೊಲೀಸರು ಬಂಧಿಸಿದ್ದರು.
2/ 12
2008ರಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಾಯಲ್ ಅವರನ್ನು ಅಹಮದಾಬಾದ್ ಪೊಲೀಸರು ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ಬಂಧಿಸಿದ್ದರು.
3/ 12
ಪಾಯಲ್ ಅವರು ವಾಸವಿರುವ ಸೊಸೈಟಿಯ ಅಧ್ಯಕ್ಷರನ್ನು ಕೆಟ್ಟದಾಗಿ ಬೈದಿದ್ದು ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರಂತೆ.
4/ 12
ಜೂನ್ 20ರಂದು ಸೊಸೈಟಿಯಲ್ಲಿ ಒಂದು ಮೀಟಿಂಗ್ ಮಾಡಲಾಗಿದ್ದು, ಅದಕ್ಕೆ ಪಾಯಲ್ ಅವರನ್ನು ಕರೆದಿರಲಿಲ್ಲವಂತೆ. ಆದರೂ ಪಾಯಲ್ ಅಲ್ಲಿಗೆ ಬಂದು ಮೀಟಿಂಗ್ನಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆಗ ಚೇರ್ಮನ್ ಅವರು ಪಾಯಲ್ ಅವರನ್ನು ಸುಮ್ಮನಾಗಿಸಿದ್ದಾರಂತೆ.
5/ 12
ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಪಾಯಲ್ ಅವರು ಸೊಸೈಟಿಯ ಚೇರ್ಮನ್ ಅವರಿಗೆ ಕೆಟ್ಟದಾಗಿ ಬೈದಿದ್ದಾರಂತೆ. ಅದಕ್ಕೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಟಿಯನ್ನು ಪೊಲೀಸರು ಬಂಧಿಸಿದ್ದರು.
6/ 12
ನಂತರ ನಟಿಗೆ ಜಾಮೀನು ಸಿಕ್ಕಿದ್ದು, ಪಾಯಲ್ ಅವರನ್ನು ಬಿಡುಗಡೆ ಮಾಡಲಾಗಿದೆಯಂತೆ.
7/ 12
ಪಾಯಲ್ ಅವರನ್ನು ಬಂಧಿಸುತ್ತಿರುವುದು ಅಥವಾ ಅವರ ವಿರುದ್ಧ ದೂರು ದಾಖಲಾಗಿರುವುದು ಇದು ಮೊದಲೇನಲ್ಲ.
8/ 12
2019ರಲ್ಲಿ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾರಣಕ್ಕೆ ನಟಿಯ ವಿರುದ್ಧ ದೂರು ದಾಖಲಾಗಿತ್ತು.
9/ 12
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಬಂಧಿಸಲಾಗಿತ್ತು.
10/ 12
ಬಂಧನವಾಗಿ ಒಂದು ದಿನದ ನಂತರ ಪಾಯಲ್ ರೋಹಟ್ಗಿ ಅವರಿಗೆ ಜಾಮೀನು ಸಿಕ್ಕಿತ್ತು.
11/ 12
ಇದೇ ಕಾರಣಕ್ಕೆ ಈ ನಟಿಯ ಟ್ವಿಟರ್ ಖಾತೆಯನ್ನು ಟ್ವಿಟರ್ ಇಂಡಿಯಾ ಡಿಲೀಟ್ ಮಾಡಿತ್ತು.
12/ 12
ಈ ವಿವಾದಿತ ನಟಿ ಈಗ ಮತ್ತೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿ ಮತ್ತೆ ಮನೆ ಸೇರಿದ್ದಾರೆ.