ಬಿಗ್ ಬಾಸ್‍ನ ಪ್ರೇಮ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಅವರು ಒಟ್ಟಿಗೆ ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಮಾಡಿದ್ದಾರೆ.
2/ 8
ಪ್ರೇಮಿಗಳ ದಿನದಂದೇ ಅರ್ಧಂಬರ್ಧ ಪ್ರೇಮಕಥೆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ, ಅರ್ಧಂಬರ್ಧ ಪ್ರೇಮಕಥೆಯಿಂದ ಮೊದಲ ಪೋಸ್ಟರ್ ರಿಲೀಸ್ ಆಗಿದೆ ಎಂದು ಅರವಿಂದ್ ಕೆ.ಪಿ ಹೇಳಿದ್ದಾರೆ.
3/ 8
ಅರ್ಧಂಬರ್ಧ ಪ್ರೇಮಕಥೆ ಎಂಬ ಪ್ರೀತಿಯ ಈ ಪ್ರಯಾಣವನ್ನು ಆಚರಿಸುವ ನಮ್ಮ ಮೊದಲ ಪೋಸ್ಟರ್ ಇದು. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ದಿವ್ಯಾ ಉರುಡುಗ ತಿಳಿಸಿದ್ದಾರೆ.
4/ 8
ಬಿಗ್ ಬಾಸ್ ಸೀಸನ್ 8 ರಲ್ಲಿ ಆತ್ಮೀಯರಾಗಿದ್ದ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಸಿನಿಮಾ ಹಾಡು ಜಿಂಗಲಕಾ ಲಕಾ ಲಕಾ ಈಗಾಗಲೇ ಫೇಮಸ್ ಆಗಿದೆ.
5/ 8
ಅರ್ಧಂಬರ್ಧ ಪ್ರೇಮ ಕಥೆಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ವಿಶೇಷ ಹಾಡನ್ನ ಸ್ವತಃ ಅರ್ಜುನ್ ಜನ್ಯ ಅವರೇ ಹಾಡಿದ್ದಾರೆ. ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಸಾಹಿತ್ಯ ಬರೆದಿದ್ದಾರೆ.
6/ 8
ಅರ್ಧಂಬರ್ಧ ಪ್ರೇಮ ಕಥೆಯ ಸಿನಿಮಾದಲ್ಲಿ ಅರವಿಂದ್ ಕೆ.ಪಿ. ಅದ್ಭುತವಾದ ಪಾತ್ರವನ್ನೇ ಮಾಡಿದ್ದಾರೆ. ನಾಯಕನನ್ನ ಪರಿಚಯಿಸೋ ಟೀಸರ್ ನೋಡಿದಾಗ, ಅರವಿಂದ್ ಕೆ.ಪಿ. ಇಲ್ಲೂ ಬೈಕ್ ರೇಸರ್ ಪಾತ್ರವನ್ನೆ ಮಾಡ್ತಿರಬಹುದು ಅಂತಲೇ ಅನಿಸುತ್ತದೆ.
7/ 8
ಅರವಿಂದ್ ಕೌಶಿಕ್ ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ರೀತಿಯಲ್ಲಿಯೇ ಕಥೆಗಳನ್ನ ಹೇಳಿದ್ದರು. ಆದರೆ ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಹೊಸದನ್ನೆ ಹೇಳೋಕೆ ಮುಂದಾಗಿದ್ದಾರೆ.
8/ 8
ಬಿಗ್ ಬಾಸ್ ಮೂಲಕ ಮೋಡಿ ಮಾಡಿದ್ದ ಜೋಡಿ, ಸಿನಿಮಾ ಮೂಲಕವೂ ಮೋಡಿ ಮಾಡುತ್ತಾ ನೋಡಬೇಕು. ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ.