ಪುಟ್ಟಗೌರಿ ಪಾತ್ರ ಮಾಡಿ ಚಿಕ್ಕವಯಸ್ಸಿನಲ್ಲಿ ಕರುನಾಡ ಜನರ ಮನಸ್ಸು ಕದ್ದಿದ್ದ ನಟಿ ಸಾನ್ಯಾ ಐಯ್ಯರ್. ನಟನೆಯಲ್ಲೇ ಏನಾದ್ರೂ ಸಾಧಿಸಬೇಕು ಎಂದು ಹಠವಿರುವವರು. ಬಿಗ್ ಬಾಸ್ ಮತ್ತು ಓಟಿಟಿ ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು. ಓಟಿಟಿ ಸೀಸನ್ ನಿಂದ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು. ಈಗ, ಆಶ್ಚರ್ಯ ಅಂದ್ರೆ ಸಾನ್ಯಾ ಐಯ್ಯರ್ ಕವನ ಬರೆದಿದ್ದಾರೆ. ನಟನೆ ಬಿಟ್ಟು ಲೇಖಕಿ ಆಗ್ತಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ನಾ ಯಾರೆಂದು ನಾ ಅರಿತರೆ, ನನ್ನ ಸುತ್ತ ನಾ ಇರುವ ಜಗತ್ತು ನನ್ನ, ಕನಸಿನೊಡನೆ ಬೆರೆಯುವುದು, ನನ್ನ ಕನಸು ಬರೀ ನನ್ನದಲ್ಲ ಅಂತರಾತ್ಮಗಳನ್ನು ಗೂಡುವುದು ಎಂದು ಬರೆದಿದ್ದಾರೆ. ಬಿಗ್ ಬಾಸ್ ಸೀಸನ್ 09ರಲ್ಲಿ ಓಟಿಟಿಯಿಂದ ಬಂದ ಸಾನ್ಯಾ ಐಯ್ಯರ್ ಮಿಂಚಿದ್ದರು. ಆಟ ನೋಟಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದರು. ಸೀರೆ ಅಂದ್ರೆ ಸಾನ್ಯಾ ಐಯ್ಯರ್ ಗೆ ತುಂಬಾ ಇಷ್ಟ. ರೇಷ್ಮೆ ಸೀರೆ ಇನ್ನು ಇಷ್ಟ ಅಂತೆ. ಆಗಾಗಾ ಸೀರೆ ಉಟ್ಟಿರುವ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ನಟಿ ಸಾನ್ಯಾ ಐಯ್ಯರ್ ಓಟಿಟಿಯಿಂದ ರೂಪೇಶ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದರು. ಇಬ್ಬರು ಯಾವಾಗಲು ಜೊತೆಗೆ ಇರುತ್ತಿದ್ರು. ಸಾನ್ಯಾ ಐಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಖುಷಿಯ ವಿಚಾರಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡ್ತಾ ಇರ್ತಾರೆ.