Saanya Iyer: ಮರಳಿ ಶಾಲೆಗೆ ಹೋದ 'ಪುಟ್ಟಗೌರಿ', ಬಾಲ್ಯ ನೆನೆದು ಖುಷಿಯಾದ ಸಾನ್ಯಾ ಐಯ್ಯರ್
ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಎಂಜಾಯ್ ಮಾಡಿದ್ದಾರೆ. ತಮ್ಮ ಶಾಲಾ ದಿನಗಳನ್ನು ನೆನೆದ 'ಪುಟ್ಟಗೌರಿ', ಶಾಲೆಯ ಶಿಕ್ಷಕರಿಗೆ "ಥ್ಯಾಂಕ್" ಎಂದಿದ್ದಾರೆ.
ಬಿಗ್ ಬಾಸ್ ಮತ್ತು ಓಟಿಟಿ ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು. ಓಟಿಟಿ ಸೀಸನ್ ನಿಂದ ಟಿವಿ ಸೀಸನ್ಗೆ ಆಯ್ಕೆ ಆಗಿದ್ದರು.
2/ 8
ಸಾನ್ಯಾ ಐಯ್ಯರ್ ರಾಜಾಜಿನಗರದ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳ ಜೊತೆ ಕಾಲ ಕಳೆದಿದ್ದಾರೆ. ಮಕ್ಕಳೊಂದಿಗೆ ಸಂವಾದ ನಡೆಸುವುದು ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
3/ 8
ಮಕ್ಕಳೊಂದಿಗೆ ಬೆರೆತಾಗ ನಾವು ಮಗುವಾಗಿ ಬಿಡುತ್ತೇವೆ. ಆಯಾ ಆಂಟಿಗಳು ನನ್ನ ಶಾಲಾ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿಗೆ ನಾವು ಧನ್ಯವಾದ ಹೇಳಬೇಕು ಎಂದು ಸಾನ್ಯಾ ಹೇಳಿದ್ದಾರೆ.
4/ 8
ಗುರು ದೇವೋ ಭವ, ಅಧ್ಯಾಪಕರು ತಮ್ಮ ಕನಸುಗಳಿಗೆ ರೆಕ್ಕೆಗಳನ್ನು ನೀಡಿದಾಗ ಯುವಕರು ಹಾರಬಲ್ಲರು. ಅಧ್ಯಯನದ ಜೊತೆಗೆ ಅವರ ಉತ್ಸಾಹವನ್ನು ಅನುಸರಿಸಲು ಅವಕಾಶ ಮಾಡಿಕೊಡುತ್ತಾರೆ ಶಿಕ್ಷಕರು ಎಂದು ಸಾನ್ಯಾ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಮಕ್ಕಳು ನನ್ನನ್ನು ಗುರುತಿಸಿದಾಗ ನನಗೆ ತುಂಬಾ ಸಂತೋಷವಾಯ್ತು. ಮಕ್ಕಳ ಜೀವನವೇ ಸುಂದರ ಎಂದು ಸಾನ್ಯಾ ಐಯ್ಯರ್ ಹೇಳಿದ್ದಾರೆ.
6/ 8
ಸಾನ್ಯಾ ಐಯ್ಯರ್ ಕೆಲ ಸಮಯ ಮಕ್ಕಳೊಂದಿಗೆ ಆಟವಾಡಿ ಖುಷಿ ಪಟ್ಟರು. ಸಾನ್ಯಾ ಐಯ್ಯರ್ ಜೊತೆ ಅವರ ತಾಯಿ ದೀಪಾ ಐಯ್ಯರ್ ಸಹ ಶಾಲೆಗೆ ಭೇಟಿ ನೀಡಿದ್ದರು.
7/ 8
ಸಾನ್ಯಾ ಐಯ್ಯರ್ಗೆ ಶಾಲೆಯವರು ಉಡುಗೊರೆಯೊಂದನ್ನು ನೀಡಿದ್ದಾರೆ. ಸಾನ್ಯಾ ಫೋಟೋಗಳಿರುವ ದೊಡ್ಡ ಫೋಟೋ ಕೊಟ್ಟಿದ್ದಾರೆ. ಸಾನ್ಯಾ ಅದನ್ನು ಕಂಡು ತುಂಬಾ ಖುಷಿಯಾಗಿದ್ದರು.
8/ 8
ಅಲ್ಲಿನ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದ ಜೊತೆ ಪೋಟೋ ಕ್ಲಿಕ್ಕಿಸಿಕೊಂಡರು. ಅವರ ಶಾಲಾ ದಿನಗಳನ್ನು ಸಾನ್ಯಾ ಐಯ್ಯರ್ ನೆನಪು ಮಾಡಿಕೊಂಡರು.