ಬಿಗ್ ಬಾಸ್ ಮತ್ತು ಓಟಿಟಿ ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು. ಓಟಿಟಿ ಸೀಸನ್ ನಿಂದ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು. ಸಾನ್ಯಾ ಐಯ್ಯರ್ ನೀಲಿ ಸೀರೆಯಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿಂಗಾರ ಸೀರೆ ಎಂದು ಫೋಟೋಗಳಿಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ನೀವೂ ನಿಜವಾದ ಸಿಂಗಾರ ಸಿರಿಯೇ ಬಿಡಿ, ಸೂಪರ್, ನೈಸ್ ಎಂದು ಜನ ಕಾಮೆಂಟ್ ಹಾಕಿದ್ದಾರೆ. ಈ ಫೋಟೋದಲ್ಲಿ ಸಾನ್ಯಾ ಐಯ್ಯರ್ ಸೀರೆ ಹಲವರಿಗೆ ಇಷ್ಟವಾಗಿದ್ರೆ, ಇನ್ನೂ ಕೆಲವರಿಗೆ ವಾಚ್ ಮೇಲೆ ಕಣ್ಣು ಬಿದ್ದಿದೆ. ನಿಮ್ಮ ವಾಚ್ ಸೂಪರ್ ಎಂದಿದ್ದಾರೆ. ಬಿಗ್ ಬಾಸ್ ಸೀಸನ್ 09ರಲ್ಲಿ ಓಟಿಟಿಯಿಂದ ಬಂದ ಸಾನ್ಯಾ ಐಯ್ಯರ್ ಮಿಂಚಿದ್ದರು. ಆಟ ನೋಟಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದರು. ಸೀರೆ ಅಂದ್ರೆ ಸಾನ್ಯಾ ಐಯ್ಯರ್ ಗೆ ತುಂಬಾ ಇಷ್ಟ. ರೇಷ್ಮೆ ಸೀರೆ ಇನ್ನು ಇಷ್ಟ ಅಂತೆ. ಆಗಾಗಾ ಸೀರೆ ಉಟ್ಟಿರುವ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಪುಟ್ಟಗೌರಿ ಪಾತ್ರ ಮಾಡಿದ್ದ ನಟಿ ಸಾನ್ಯಾ ಐಯ್ಯರ್ ಇತ್ತಿಚೇಗೆ ಪದವಿ ಪಡೆದಿದ್ದಾರೆ. ಅದನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟಿ ಸಾನ್ಯಾ ಐಯ್ಯರ್ ಓಟಿಟಿಯಿಂದ ರೂಪೇಶ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದರು. ಇಬ್ಬರು ಯಾವಾಗಲು ಜೊತೆಗೆ ಇರುತ್ತಿದ್ರು.