ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯೂ ಕಲರ್ ಡ್ರೆಸ್ನಲ್ಲಿ ದೀಪಿಕಾ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.
2/ 8
ದೀಪಿಕಾ ದಾಸ್ ಫೋಟೋ ಜೊತೆ ನೆವರ್ ಗಿವ್ ಅಪ್, ಗ್ರೇಟ್ ಥಿಂಗ್ಸ್ ಟೇಕ್ ಟೈಮ್ ಎಂದು ಬರೆದುಕೊಂಡಿದ್ದಾರೆ.ಫೋಟೋಗಳಲ್ಲಿ ಮಿಂಚುತ್ತಿದ್ದಾರೆ.
3/ 8
ದೀಪಿಕಾ ದಾಸ್ ಈ ರೀತಿ ಬರೆದುಕೊಂಡಿರುವುದಕ್ಕೆ, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಹಾಗಾದ್ರೆ ದೀಪಿಕಾ ಅವರು ಮಾಡಲು ಹೊರಟಿರುವ ಆ ದೊಡ್ಡ ಕೆಲಸ ಏನು ಎಂದು ಕೇಳ್ತಾ ಇದ್ದಾರೆ.
4/ 8
ಅಲ್ಲದೇ ಕೆಲವು ಅಭಿಮಾನಿಗಳು ದೀಪಿಕಾ ದಾಸ್ ಮದುವೆ ಸುದ್ದಿ ಏನಾದ್ರೂ ಹೇಳ್ತಾರಾ ಎಂದು ಕೇಳುತ್ತಿದ್ದಾರೆ. ಆದ್ರೆ ದೀಪಿಕಾ ಈ ಬಗ್ಗೆ ಏನೂ ಹೇಳಿಲ್ಲ.
5/ 8
ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್ ಟಾಪ್ 3 ನಲ್ಲಿ ಇದ್ದರು. ತಮ್ಮ ಅದ್ಭುತವಾದ ನಟನೆ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು.
6/ 8
ದೀಪಿಕಾ ದಾಸ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರೇ ಗೆಲ್ಲಬಹುದು ಎಂದು ಎಲ್ಲರೂ ಹೇಳ್ತಾ ಇದ್ರು. ಆದ್ರೆ ಬ್ಯಾಡ್ ಲಕ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದರು.
7/ 8
ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ, ಗೆಲುವು ಯಾಕೋ ಸಿಗಲಿಲ್ಲ. ಲಕ್ ಎಲ್ಲೋ ಕೈ ಕೊಡ್ತು ಎಂದು ಹೇಳಿಕೊಂಡಿದ್ದರು.
8/ 8
ದೀಪಿಕಾ ದಾಸ್ ಮುಂದೆ ಏನ್ ಮಾಡ್ತಾರೆ? ಸಿನಿಮಾನಾ, ಧಾರಾವಾಹಿನಾ ಎಂದು ಕೇಳುತ್ತಿದ್ದಾರೆ. ದೀಪಿಕಾ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆ