ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ದೀಪಿಕಾ ದಾಸ್ ದುಬೈ ಟ್ರಿಪ್ ಎಂಜಾಯ್ ಮಾಡ್ತಾ ಇದ್ದಾರೆ. ಜಾಲಿ ಮೂಡ್‍ನಲ್ಲಿ ಇದ್ದಾರೆ. ನೀವು ಇಷ್ಟ ಪಟ್ಟಂತೆ ಬದುಕಿ ಎನ್ನುವ ಸಂದೇಶದ ಜೊತೆಗೆ ದೀಪಿಕಾ ದಾಸ್ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದೀಪಿಕಾ ದಾಸ್ ಫೋಟೋಗಳನ್ನು ನೋಡಿ ಜನ ವಾವ್ ಸೂಪರ್ ಎಂದಿದ್ದಾರೆ. ನಿಮ್ಮ ಕ್ಯೂಟ್ ನಗು ಸದಾ ನಮಗೆ ಇಷ್ಟ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್ ಟಾಪ್ 3 ನಲ್ಲಿ ಇದ್ದರು. ತಮ್ಮ ಅದ್ಭುತವಾದ ನಟನೆ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು. ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ, ಗೆಲುವು ಯಾಕೋ ಸಿಗಲಿಲ್ಲ. ಲಕ್ ಎಲ್ಲೋ ಕೈ ಕೊಡ್ತು ಎಂದು ಹೇಳಿಕೊಂಡಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 07 ರಲ್ಲಿ ಶೈನ್ ಶೆಟ್ಟಿ ಜೊತೆ ತುಂಬಾ ಆತ್ಮೀಯರಾಗಿದ್ದರು. ಇಬ್ಬರ ನಡುವೆ ಪ್ರೀತಿ ಇದೆ. ಮದುವೆ ಆಗ್ತಾರೆ ನ್ನುವ ಸುದ್ದಿ ಹರಿದಾಡ್ತಾ ಇದೆ. ದೀಪಿಕಾ ದಾಸ್ ಕೆಲ ದಿನಗಳ ಹಿಂದೆ ದೊಡ್ಡದೇನೋ ಆಗಲು ಸಮಯ ಬೇಕಾಗುತ್ತದೆ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದು ಏನಿರಬಹುದು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ದೀಪಿಕಾ ದಾಸ್ ಮುಂದೆ ಏನ್ ಮಾಡ್ತಾರೆ? ಸಿನಿಮಾನಾ, ಧಾರಾವಾಹಿನಾ ಎಂದು ಕೇಳುತ್ತಿದ್ದಾರೆ ಅಭಿಮಾನಿಗಳು. ದೀಪಿಕಾ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆ.