ಬಿಗ್ ಸೀಸನ್ 1ರ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸದಾ ನಗು ಮೂಡುವಂತೆ ಮಾಡ್ತಾರೆ.
2/ 8
ಬಿಗ್ ಬಾಸ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಟೈಮ್ ನಲ್ಲಿ ಅರುಣ್ ಸಾಗರ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು. ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು.
3/ 8
ಅರುಣ್ ಸಾಗರ್ ಅವರ ಜರ್ನಿ ಮುಗೀತಾ ಎಂಬ ಪ್ರಶ್ನೆಗಳು ಮೂಡಿದ್ವು. ಯಾಕಂದ್ರೆ ಅರುಣ್ ಸಾಗರ್ ಕಣ್ಣೀರಿಡುತ್ತಾ ಮನೆಯಿಂದ ಆಚೆ ಹೋಗಿದ್ದರು.
4/ 8
ಅರುಣ್ ಸಾಗರ್ ಸಂಜೆಯ ನಂತರ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಆಗ ಅಭಿಮಾನಿಗಳು ಖುಷಿ ಪಟ್ಟರು. ಕೆಲವರಿಗೆ ಯಾಕ್ ಹೋಗಿದ್ರು ಎಂದು ಗೊತ್ತಾಗಲಿಲ್ಲ.
5/ 8
ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಅದಕ್ಕೆ ಅರುಣ್ ಸಾಗರ್ ಪುತ್ರಿಯನ್ನು ನೋಡಲು ಹೋಗಿದ್ದರು.
6/ 8
ಮಗಳಿಗೆ ತಲೆ ಸುತ್ತ ಬಂದು ಬಿದ್ದಿದ್ದಳು. ಈಗ ಆಸ್ಪತ್ರೆಯಲ್ಲಿ ಇದ್ದಾಳೆ. ಗುಣವಾಗ್ತಿದ್ದಾಳೆ ಎಂದು ಅರುಣ್ ಸಾಗರ್ ಸ್ಪರ್ಧಿಗಳ ಬಳಿ ಹೇಳಿದ್ದಾರೆ.
7/ 8
ಅರುಣ್ ಸಾಗರ್ ಅವರಿಗೆ ಮಗಳು ಎಂದ್ರೆ ತುಂಬಾ ಇಷ್ಟ. ತಮ್ಮ ಮಗಳು ನೋವಿನಲ್ಲಿರುವುದು ಆಘಾತ ತಂದಿದೆ. ನೋವಿನಲ್ಲಿರುವ ಅರುಣ್ ಅವರು ಹೇಗೆ ಆಟ ಮುಂದುವರಿಸುತ್ತಾರೆ ನೋಡಬೇಕು.
8/ 8
ಡಿಸೆಂಬರ್ 31, ಜನವರಿ 1ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅರುಣ್ ಸಾಗರ್ ಈ ಬಾರಿ ಗೆಲ್ತಾರಾ ನೋಡಬೇಕು. ಅರುಣ್ ಸಾಗರ್ ಎಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು.