'ಅಕ್ಕ' ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ಅನುಪಮಾ ಗೌಡ, ತಮ್ಮ ಹುಟ್ಟುಹಬ್ಬವನ್ನು ಆತ್ಮೀಯರ ಜೊತೆ ಆಚರಿಸಿಕೊಂಡಿದ್ದಾರೆ. ಅನುಪಮಾ ಗೌಡ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸ್ನೇಹಿತರು, ಆತ್ಮೀಯರು, ಕಲಾವಿದರು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ಅನುಪಮಾ ಗೌಡ ಅವರು ಸ್ನೇಹಿತರು ಆಚರಿಸಿದ ಹುಟ್ಟುಹಬ್ಬದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಎಲ್ಲಾ ಫೋಟೋಗಳಲ್ಲಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ನಟಿ ನೇಹಾ ಗೌಡ ಮತ್ತು ಅನುಪಮಾ ಗೌಡ ಇಬ್ಬರು ಆತ್ಮೀಯ ಸ್ನೇಹಿತರು. ಅವರು ಸಹ ಅನುಪಮಾ ಬರ್ತ್‍ಡೇಯಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟಿದ್ದಾರೆ. ಅನುಪಮಾ ಗೌಡ ಅವರು ಬಿಗ್ ಬಾಸ್ ಮೂಲಕ ಹೆಚ್ಚು ಜಪಪ್ರಿಯತೆ ಪಡೆದಿದ್ದಾರೆ. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚಿದ್ರು. ನಟಿಯಾಗಿಯೂ ಸಿನಿಮಾ ಮಾಡಿದ್ರು. ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ. ಇತ್ತೀಚೆಗೆ ಜೈಪುರ ಟ್ರಿಪ್ ಹೋಗಿದ್ದರು. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದರು. ಅಲ್ಲಿಂದ ಬಂದ ಮೇಲೆ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಅನುಪಮಾ ಗೌಡ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ರು. ತುಂಬಾ ಚೆನ್ನಾಗಿ ಆಟವಾಡಿದ್ರು. ಮತ್ತೊಮ್ಮೆ ಕರುನಾಡ ಜನರ ಮನಸ್ಸು ಗೆದ್ದಿದ್ದರು.