ಅಕ್ಕ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ಅನುಪಮಾ ಗೌಡ ಬಿಗ್ ಬಾಸ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ. (ಚಿತ್ರ:ಇನ್‍ಸ್ಟಾಗ್ರಾಂ) ನಟಿ ಅನುಪಮಾ ಗೌಡ ಅವರು ಸೀರೆ ಲವ್ವರ್ ಅಂತೆ. ಸೀರೆಗಳನ್ನು ಹಾಕುವುದು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಬಗೆ ಬಗೆಯ ಸೀರೆ ಕಲೆಕ್ಷನ್ ಅವರ ಬಳಿ ಇದೆ. ಅನುಪಮಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅನುಪಮಾ ತುಂಬಾ ಸುಂದರವಾಗಿ ಕಾಣ್ತಾ ಇದ್ದಾರೆ. ಅನುಪಮಾ ಗೌಡ ಅವರನ್ನು ಸೀರೆಯಲ್ಲಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸುಂದರವಾಗಿ ಕಾಣ್ತೀರಿ, ಕ್ಯೂಟ್ ಲುಕ್ ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 09ರಲ್ಲಿ ಅನುಪಮಾ ಗೌಡ ಟಾಸ್ಕ್ ಗಳಲ್ಲಿ ಸೋತೇ ಇಲ್ಲ. ಅಲ್ಲದೇ ಅಡುಗೆ ಮನೆ, ಮನರಂಜನೆ, ಮನೆಯವರ ಜೊತೆಯೂ ಚೆನ್ನಾಗಿದ್ದರು. ಅನುಪಮಾ ಗೌಡ ಅವರೇ ಈ ಬಾರಿ ಬಿಗ್ ಬಾಸ್ ವಿನ್ ಆಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬ್ಯಾಡ್ ಲಕ್ ಟಾಪ್ 5 ಸಹ ಬರಲಿಲ್ಲ. ಅನುಪಮಾ ಗೌಡ ಅವರಿಗೆ ಅವರ ಸ್ನೇಹಿತರು ಬಿಗ್ ಸರ್ಪ್ರೈಸ್ ಕೊಟ್ಟಿದ್ದರು. ನೀವೇ ನಿಜವಾದ ವಿನ್ನರ್ ಎಂದು ಹೇಳಿ ದೊಡ್ಡ ಪಾರ್ಟಿ ಮಾಡಿದ್ದರು. ಅನುಪಮಾ ಗೌಡ ಅವರು ನೆಕ್ಟ್ ಏನ್ ಮಾಡ್ತಾರೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದಕ್ಕೆ ನಟಿ ಅನುಪಮಾ ಅವರೇ ಉತ್ತರ ನೀಡಬೇಕು.