ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ಅನುಪಮಾ ಗೌಡ ಈ ಬಾರಿ ಸದ್ದು ಮಾಡಿದ್ದರು. ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಇದು ಬಿಗ್ ಬಾಸ್ ಫಿನಾಲೆಗೆ ರೆಡಿ ಮಾಡಿಸಿದ್ದ ಡ್ರೆಸ್, ಅವತ್ತು ಅನುಪಮಾ ಇದೇ ಡ್ರೆಸ್ ಹಾಕಿಕೊಂಡಿದ್ದರು. ಆ ಫೋಟೋಗಳನ್ನು ಈಗ ಶೇರ್ ಮಾಡಿದ್ದಾರೆ. ಅನುಪಮಾ ಗೌಡ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಫೋಟೋ ತುಂಬಾ ಚೆನ್ನಾಗಿವೆ. ಸುಂದರಿ ರೀತಿ ಇದ್ದೀರಿ ಎಂದು ಜನ ಕಾಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 09ಕ್ಕೆ ಮನೆಗೆ ಹೋದಾಗಿನಿಂದ ಅನುಪಮಾ ಗೌಡ ಟಾಸ್ಕ್ ಗಳಲ್ಲಿ ಸೋತೇ ಇಲ್ಲ. ಅಲ್ಲದೇ ಅಡುಗೆ ಮನೆ, ಮನರಂಜನೆ, ಮನೆಯವರ ಜೊತೆಯೂ ಚೆನ್ನಾಗಿದ್ದರು. ಅನುಪಮಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋ ಗಳಲ್ಲಿ ಅನುಪಮಾ ತುಂಬಾ ಸುಂದರವಾಗಿ ಕಾಣ್ತಾ ಇದ್ದಾರೆ. ಅನುಪಮಾ ಗೌಡ ಅವರೇ ಈ ಬಾರಿ ಬಿಗ್ ಬಾಸ್ ವಿನ್ ಆಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬ್ಯಾಡ್ ಲಕ್ ಟಾಪ್ 5 ಸಹ ಬರಲಿಲ್ಲ. ಕಳೆದ ವಾರವಷ್ಟೇ ಅನುಪಮಾ ಅವರಿಗೆ ಅವರ ಸ್ನೇಹಿತರು ಬಿಗ್ ಸರ್ಪ್ರೈಸ್ ಕೊಟ್ಟಿದ್ದರು. ನೀವೇ ನಿಜವಾದ ವಿನ್ನರ್ ಎಂದು ಹೇಳಿದ್ದರು. ಅನುಪಮಾ ಗೌಡ ಅವರು ನೆಕ್ಟ್ ಏನ್ ಮಾಡ್ತಾರೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದಕ್ಕೆ ನಟಿ ಅನುಪಮಾ ಅವರೇ ಉತ್ತರ ನೀಡಬೇಕು.