ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕಮಲಿ ಧಾರಾವಾಹಿ ಮೂಲಕ ಅಮೂಲ್ಯ ಗೌಡ ಖ್ಯಾತಿ ಪಡೆದಿದ್ದಾರೆ. ಹಳ್ಳಿ ಹುಡುಗಿಯ ರೀತಿ ಅದ್ಭುತವಾಗಿ ನಟಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಅಮೂಲ್ಯ ಗೌಡ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಮೂಲ್ಯ ಫೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿವೆ. ಸೂಪರ್, ನೈಸ್, ಬಾರ್ಬಿ ಡಾಲ್ ತರ ಕಾಣ್ತಾ ಇದ್ದೀರಿ. ಲುಕ್ಕಿಂಗ್ ಬೋಲ್ಡ್ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ. ಮಾರ್ಡನ್ ಡ್ರೆಸ್‍ನಲ್ಲಿ ಎಲ್ಲೋ ನೋಡುತ್ತಾ, ಫೋನ್ ನೋಡುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಡ್ರೆಸ್‍ಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿದ್ದಾರೆ. ಕಮಲಿ ಧಾರಾವಾಹಿಯಿಂದ ಫೇಮಸ್ ಆದ ಅಮೂಲ್ಯ ಗೌಡ ಅವರು ಬಿಗ್ ಬಾಸ್ 09ರ ಸೀಸನ್‍ಗೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಎಲ್ಲಾ ಟಾಸ್ಕ್ ಆಡಿ ಅಭಿಮಾನಿಗಳನ್ನು ಗಳಿಸಿದ್ದರು. ಧಾರಾವಾಹಿಯಲ್ಲಿ ಸದಾ ಲಂಗಾ ದಾವಣಿ, ಸೀರೆ ಹಾಕುತ್ತಿದ್ದ ಅಮೂಲ್ಯ ಗೌಡರನ್ನು ಬಿಗ್ ಬಾಸ್ ಶೋನಲ್ಲಿ ಮಾರ್ಡನ್ ಡ್ರೆಸ್‍ನಲ್ಲಿ ನೋಡಿ ಜನ ಮೆಚ್ಚಿಕೊಂಡಿದ್ದರು. ಅಮೂಲ್ಯ ಗೌಡ ಆಟ, ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಆದ್ರೆ ಎಲ್ಲರ ಜೊತೆ ಜಗಳ ಮಾಡಿಕೊಳ್ತಾ ಇದ್ರು. ಬಿಗ್ ವಿನ್ ಆಗುವ ಲಕ್ ಇವರದ್ದು ಆಗಲಿಲ್ಲ. ನಟಿ ಅಮೂಲ್ಯ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಅದಕ್ಕೆ ನಟಿ ಅಮೂಲ್ಯ ಅವರೇ ಉತ್ತರ ಹೇಳಬೇಕಿದೆ.