Bigg Boss 8: ಪ್ರಶಾಂತ್ ಸಂಬರಗಿ ನಂತರ ನಿಧಿ ಸುಬ್ಬಯ್ಯ ವಿಚ್ಛೇದನದ ವಿಷಯ ಚರ್ಚಿಸಿದ ಚಕ್ರವರ್ತಿ ಚಂದ್ರಚೂಡ..!
ನಿಧಿ ಸುಬ್ಬಯ್ಯ ಅವರ ಬಗ್ಗೆ ಆಗಾಗ ಪ್ರಶಾಂತ್ ಸಂಬರಗಿ ಮಾತನಾಡುವುದನ್ನು ಕೇಳಿದ್ದೇವೆ. ಆದರೆ ಈಗ ಸಂಬರಗಿ ಜೊತೆ ಅವರ ಸ್ನೇಹಿತ ಚಕ್ರವರ್ತಿ ಚಂದ್ರಚೂಡ ಸಹ ಸೇರಿಕೊಂಡಿದ್ದಾರೆ. ಹೌದು, ಕಾರಣ ಇಲ್ಲದೆ ನಿಧಿ ಸುಬ್ಬಯ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಚಕ್ರವರ್ತಿ ಮಾತನಾಡಲು ಆರಂಭಿಸಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭವಾದಾಗಿನಿಂದ ಮನೆಯಲ್ಲಿ ಸಾಕಷ್ಟು ಜಗಳ - ಮನಸ್ತಾಪ ಆಗುತ್ತಲೇ ಇದೆ.
2/ 11
ನಿತ್ಯ ಒಬ್ಬರಲ್ಲ ಒಬ್ಬರು ಕಣ್ಣೀರಿಡುತ್ತಿದ್ದಾರೆ. ಜೋರಾಗಿ ಮಾತಿನ ಚಕಮಕಿ ನಡೆಯುತ್ತಲೇ ಇದೆ.
3/ 11
ನಿನ್ನೆಯಷ್ಟೆ ಅರವಿಂದ್ ಆಡಿದ ಮಾತುಗಳಿಂದ ನಿಧಿ ಸುಬ್ಬಯ್ಯ ಫುಲ್ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದರು.
4/ 11
ಈಗ ಇದೇ ನಿಧಿ ಸುಬ್ಬಯ್ಯ ಅವರ ಬಗ್ಗೆ ಯಾವುದೇ ಕಾರಣ ಇಲ್ಲದೆ ಚಕ್ರವರ್ತಿ ಚಂದ್ರಚೂಡ ಅವರು ಹಿಂದೆ ಮಾತನಾಡಲು ಆರಂಭಿಸಿದ್ದಾರೆ.
5/ 11
ಈ ಮನೆಯಲ್ಲಿ ನಾನು ಮಾತ್ರ ವಿಚ್ಛೇದನ ಪಡೆದು ಬಂದಿರೋದಾ...? ಮತ್ತಾರೂ ಇಲ್ಲವಾ ಎನ್ನುತ್ತಲೇ ನಿಧಿ ಹೆಸರು ಪ್ರಸ್ತಾಪಿಸಿದ್ದಾರೆ ಚಕ್ರವರ್ತಿ.
6/ 11
ಮಂಜು ಜೊತೆ ಯಾರು ಚೆನ್ನಾಗಿರುತ್ತಾರೋ ಅವರ ಬಗ್ಗೆ ಮಾತನಾಡಲು ಶುರು ಮಾಡುವ ಚಕ್ರವರ್ತಿ, ಮಂಜು ಅವರನ್ನು ನಿಧಿ ಏನಾದರೂ ವಹಿಸಿಕೊಂಡು ಬಂದು ಮಾತನಾಡಿದರೆ ಸುಮ್ಮನೆ ಇರುವುದಿಲ್ಲ ಎಂದಿದ್ದಾರೆ ಚಕ್ರವರ್ತಿ.
7/ 11
ನಿಧಿ ಸುಬ್ಬಯ್ಯ ಸಹ ಗಂಡನಿಂದ ವಿಚ್ಛೇದನ ಪಡೆದ ನಂತರವೇ ಇಲ್ಲಿಗೆ ಬಂದಿರೋದು ಎಂದೆಲ್ಲ ಚಂದ್ರಚೂಡ ಅವರು ಪ್ರಶಾಂತ್ ಸಂಬರಗಿ ಬಳಿ ಚರ್ಚಿಸಿದ್ದಾರೆ.
8/ 11
ಚಂದ್ರಚೂಡ ಹಾಗೂ ಪ್ರಶಾಂತ್ ಸಂಬರಗಿ ಅವರ ವರ್ತನೆ ನಿಧಿ ಸುಬ್ಬಯ್ಯ ಅವರಿಗೆ ಮೊದಲಿನಿಂದಲೂ ಇಷ್ಟವಿಲ್ಲ.
9/ 11
ಚಂದ್ರಚೂಡ ಅವರು ಮಾತನಾಡಿರುವ ವಿಷಯ ನಿಧಿ ಸುಬ್ಬಯ್ಯ ಅವರಿಗೆ ಇನ್ನೂ ಗೊತ್ತಾಗಿಲ್ಲ.
10/ 11
ಈ ವಾರಾಂತ್ಯದಲ್ಲಿ ಏನಾದರೂ ಟ್ವಿಸ್ಟ್ ಕೊಟ್ಟು ಈ ವಿಷಯಗಳು ಚರ್ಚೆಗೆ ಬಂದರೂ ಬರಬಹುದು ಎನ್ನಲಾಗುತ್ತಿದೆ.
11/ 11
ಪ್ರಶಾಂತ್ ಹಾಗೂ ಚಂದ್ರಚೂಡ ಅವರಿಂದಾಗಿ ಮನೆಯ ವಾತಾವರಣ ಕೊಂಚ ಬಿಸಿಯಾಗಿರುವುದಂತೂ ಸತ್ಯ.