Bigg Boss 8: ಶಮಂತ್ ಮತ್ತೆ ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅವರ ಹಿಂದೆ ಸುತ್ತೋಕೆ ಆರಂಭಿಸಿದಂತೆ ಕಾಣಿಸುತ್ತಿದೆ. ಸಿಹಿಯಾಗಿ ಮಾತನಾಡುತ್ತಾ ಅವರ ಮನ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಬ್ರೊ ಗೌಡ. ಅದಕ್ಕೆ ಇತರೆ ಸ್ಪರ್ಧಿಗಳು ಸೇರಿ ಶಮಂತ್ ಅವರಿಗೆ ಹೊಸ ಹೆಸರು ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಶಮಂತ್ ಅಲಿಯಾಸ್ ಬ್ರೊ ಗೌಡ ನಿನ್ನೆಯಷ್ಟೆ ಕ್ಯಾಪ್ಟನ್ ಕೋಣೆಯಲ್ಲಿ ಏನೋ ಕಪ್ಪು ಬಣ್ಣದ ಆಕಾರ ಓಡಾಡಿತ್ತು ಅಂತ ಹೆದರಿಕೊಂಡಿದ್ದರು.
2/ 8
ಹೆದರಿಕೊಂಡಿದ್ದ ಶಮಂತ್ ಕುರ್ಚಿ ಪಾಲಿಟಿಕ್ಸ್ ಟಾಕ್ಸ್ ಮಾಡುವಾಗ ತಮಾಷೆಯಾಗಿ ಮಾತನಾಡುತ್ತಾ ಸ್ಪರ್ಧಿಗಳ ಕಣ್ಣಿಗೆ ಬಿದ್ದಿದ್ದಾರೆ.
3/ 8
ಮೊದಲಿಗೆ ದಿವ್ಯಾ ಸುರೇಶ್ ಅವರನ್ನು ಬ್ಯೂಟಿ ಸುರೇಶ್ ಎಂದು ಹೊಗಳಿದ ಶಮಂತ್ ನಂತರ ಪ್ರಿಯಾಂಕಾ ತಿಮ್ಮೇಶ್ ಅವರನ್ನು ಸ್ಟ್ರಾಬೆರಿಗೆ ಹೋಲಿಸಿದ್ದಾರೆ.
4/ 8
ನಂತರ ಯಾರೂ ತಪ್ಪು ತಿಳಿಯ ಬಾರದೆಂದು ನಡುವೆ ನಿಧಿ ಸುಬ್ಬಯ್ಯ ಅವರನ್ನು ಚಿನ್ನ ಸುಬ್ಬಯ್ಯ ಎಂದಿದ್ದಾರೆ.
5/ 8
ಪ್ರಿಯಾಂಕಾ ತಿಮ್ಮೇಶ್ ಅವರನ್ನು ಸ್ಟ್ರಾಬೆರಿಗೆ ಹೋಲಿಕೆ ಮಾಡುತ್ತಿದ್ದಂತೆಯೇ ಹಿಂದೆ ಕುಳಿತಿದ್ದ ವೈಷ್ಣವಿ, ಶಮಂತ್ ಅವರಿಗೆ ಬಕೆಟ್ ಎಂದು ಕರೆದಿದ್ದಾರೆ.
6/ 8
ಬಕೆಟ್ ಅಂತ ಕರೆದ ಕೂಡಲೇ ಶಮಂತ್ ಅವರನ್ನು ಮನೆಯವರೆಲ್ಲ ಬಿಗ್ ಬಾಸ್ ಮನೆಯ ದೊಡ್ಡ ಬಕೆಟ್ ಅಂತ ಕಾಲೆಳೆದಿದ್ದಾರೆ. ಹುಡುಗಿಯನ್ನು ಹಣ್ಣಿಗೆ ಹೋಲಿಸಿದ್ದೇ ತಪ್ಪಾ ಎಂದರೆ ಸ್ಪರ್ಧಿಗಳು ಶಮಂತ್ ಅವರನ್ನು ಮತ್ತಷ್ಟು ಆಟವಾಡಿಸಿದ್ದಾರೆ.
7/ 8
ಮೊದಲಿಗೆ ದಿವ್ಯಾ ಸುರೇಶ್ ಹಿಂದೆ ಬಿದ್ದಿದ್ದ ಶಮಂತ್ ನಂತರದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರ ಹಿಂದೆ ಸುತ್ತಾಡ ತೊಡಗಿದ್ದರು.
8/ 8
ಶಮಂತ್ ಸದಾ ಹುಡುಗಿಯರನ್ನು ಹೊಗಳಿ ಅಟ್ಟಕೇರಿಸುತ್ತಾ ಬಕೆಟ್ ಹಿಡಿಯುತ್ತಾರೆ ಅಂತ ಮನೆಯವರು ಆಡಿಕೊಳ್ಳುತ್ತಿದ್ದಾರೆ.