Sara Ali Khan-Janhvi Kapoor: ಇವರಿಬ್ಬರಲ್ಲಿ ಯಾರು ಹಾಟ್-ಯಾರು ಕ್ಯೂಟ್..!
ಬಾಲಿವುಡ್ನ ಇಬ್ಬರು ಪ್ರಿನ್ಸೆಸ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಅವರು ಟಿವಿ ಶೋವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಫೋಟೋಶೂಟ್ ಮಾಡಿಸಲಾಗಿದ್ದು, ಅದರ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ನ ಉದಯೋನ್ಮುಖ ನಟಿಯರಾದ ಜಾಹ್ನವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಬೆಳ್ಳಿತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳದೆ ಹೋದರೂ ಕುರಿತೆರೆಯಲ್ಲಿ ಅವರು ವೇದಿಕೆ ಹಂಚಿಕೊಂಡಿದ್ದಾರೆ.
2/ 7
ರಣವೀರ್ ಸಿಂಗ್ ಅವರು ಕಿರುತೆರೆಯಲ್ಲಿ ನಡೆಸಿಕೊಡುವ ಶೋನಲ್ಲಿ ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಕ್ವಿಜ್ ಆಡಲು ಬಂದಿದ್ದಾರೆ. ಈ ನಟಿಯನ್ನು ನೋಡಿದ ವೀಕ್ಷಕರು ದಂಗಾಗಿದ್ದಾರೆ.
3/ 7
ಕೆಲ ಸಮಯದ ಹಿಂದೆ ಕಿರುತೆರೆಯಲ್ಲಿ ರಣವೀರ್ ಸಿಂಗ್ ಅವರು ದ ಬಿಗ್ ಪಿಕ್ಚರ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಅದರ ನಿರೂಪಣೆ ಮಾಡುತ್ತಿದ್ದಾರೆ. ಈ ವೇದಿಕೆ ಮೇಲೆ ಈಗ ಈ ನಟಿಯರು ಕಾಣಿಸಿಕೊಂಡಿದ್ದಾರೆ.
4/ 7
ಈ ಕಾರ್ಯಕ್ರಮಕ್ಕೂ ಮುನ್ನ ಈ ನಟಿಯರ ಫೋಟೋಶೂಟ್ ಮಾಡಿಸಲಾಗಿದ್ದು, ಅದರ ಚಿತ್ರಗಳನ್ನು ಸಾರಾ ಹಾಗೂ ಜಾಹ್ನವಿ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ.
5/ 7
ಸಾರಾ ಲಿ ಖಾನ್ ಕಡೆಯದಾಗಿ ಕೂಲಿ ನಂ 1 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಇನ್ನು ಅತ್ರಂಗಿ ರೇ ಚಿತ್ರದಲ್ಲಿ ಸಾರಾ ಅಭಿನಯಿಸುತ್ತಿದ್ದಾರೆ.
6/ 7
ಇನ್ನು ಇತ್ತೀಚೆಗಷ್ಟೆ ಸಾರಾ ಅಲಿ ಖಾನ್ ಅವರ ಹೆಸರು ಹೊಸ ಪ್ರಾಜೆಕ್ಟ್ನಲ್ಲೂ ಸಹ ಕೇಳಿ ಬಂದಿದೆ. ಆದರೆ, ಇನ್ನೂ ಆ ಕುರಿತಾದ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.
7/ 7
ಜಾಹ್ನವಿ ಕಪೂರ್ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಅವುಗಳಲ್ಲಿ ಕೆಲವು ಸಿನಿಮಾಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಸದ್ಯ ಫೋಟೋಶೂಟ್ ಹಾಘೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ.