Ram Charan -Shankar ಕಾಂಬಿನೇಶನ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ: ಪೋಸ್ಟರ್ಗಾಗಿ ಕೋಟಿ ಖರ್ಚು..!
ನಿರ್ದೇಶಕ ಶಂಕರ್ (Director Shankar) ಅವರ ಸಿನಿಮಾ ಎಂದ ಕೂಡಲೇ ಬಜೆಟ್ ಎಷ್ಟು ಎಂದು ಕೇಳುವಂತಾಗಿದೆ... ಹೌದು, ಇವರು ಒಂದು ಸಿನಿಮಾಗೆ ಖರ್ಚು ಮಾಡುವ ಹಣದಲ್ಲಿ ಸುಮಾರು ಹತ್ತು ಚಿತ್ರಗಳ ನಿರ್ಮಾಣ ಮಾಡಬಹುದು. ಅದಕ್ಕೆ ಬಿಗ್ ಬಜೆಟ್ (Big Budget Movies) ಸಿನಿಮಾಗಳಿಗೆ ಶಂಕರ್ ಅವರು ಹೆಸರುವಾಸಿಯಾಗಿದ್ದಾರೆ. 5 ವರ್ಷಗಳ ಹಿಂದೆ 2.0 ಸಿನಿಮಾಗಾಗಿ 400 ಕೋಟಿ ಖರ್ಚು ಮಾಡಿದ್ದರು ಶಂಕರ್. ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದು, ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಮ್ ಚರಣ್ (Ram Charan) ಹಾಗೂ ಕಿಯಾರಾ (Kiara Advani) ನಟಿಸುತ್ತಿದ್ದಾರೆ. ಆದರೆ, ಬಾಲಿವುಡ್ನ ರಣವೀರ್ ಸಿಂಗ್ (Ranveer Singh) ಸಹ ಈ ಸಿನಿಮಾದ ಸೆಟ್ನಲ್ಲಿ ಕಾಣಿಸಿಕೊಂಡಿದ್ದು ವಿಶೇಷ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ರಾಜಮೌಳಿ ನಿರ್ದೇಶನ ಆರ್ಆರ್ಆರ್ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದರಂತೆಯೇ ರಾಮ್ ಚರಣ್ ತೇಜ ಅವರು ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ. ಈ ಸಲ ಬಿಗ್ ಬಜೆಟ್ ಸಿನಿಮಾಗಳ ನಿರ್ದೇಶಕ ಎಂದೇ ಖ್ಯಾತರಾಗಿರುವ ಶಂಕರ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
2/ 9
ಆರ್ 15 ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಇದರ ಮುಹೂರ್ತ ನಿನ್ನೆ ನೆರವೇರಿತು. ಈ ಚಿತ್ರದ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಚಿರಂಜೀವಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಸಹ ಭಾಗಿಯಾಗಿದ್ದರು.
3/ 9
ಬಿಗ್ ಬಜೆಟ್ ಸಿನಿಮಾ ಎನ್ನಲಾಗುತ್ತಿರುವ ಈ ಚಿತ್ರಕ್ಕೆ ಚಿರಂಜೀವಿ ಅವರು ಕ್ಲ್ಯಾಪ್ ಮಾಡಿ ಚಾಲನೆ ಕೊಟ್ಟಿದ್ದಾರೆ. ಇನ್ನು ರಾಮ್ ಚರಣ್ ಹಾಗೂ ಕಿಯಾರಾ ಅವರು ಸೂಟ್ನಲ್ಲಿ ಕಾಣಿಸಿಕೊಂಡಿದ್ದು ಒಟ್ಟಿಗೆ ಬರುವ ದೃಶ್ಯವನ್ನು ನಿನ್ನೆ ಚಿತ್ರೀಕರಿಸಲಾಗಿದೆ.
4/ 9
ಶಂಕರ್ ಅವರ 50 ಸಿನಿಮಾ ಇದಾದರೆ, ರಾಮ್ ಚರಣ್ ಅವರ 15ನೇ ಚಿತ್ರವಾಗಿದೆ. ಸದ್ಯಕ್ಕೆ ಇದಕ್ಕೆ ಆರ್ ಸಿ 15 ಎಂದು ಹೆಸರಿಡಲಾಗಿದೆ.ಈಗ ರಿಲೀಸ್ ಆಗಿರುವ ಕಾನ್ಸೆಪ್ಟ್ ಪೋಸ್ಟರ್ಗೆ 1.73 ಕೋಟಿ ಖರ್ಚು ಮಾಡಲಾಗಿದೆಯಂತೆ.
5/ 9
ಇನ್ನು ಈ ಪ್ಯಾನ್ ಇಂಡಿಯಾ ಸಿನಿಮಾದ ಮುಹೂರ್ತಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಬಂದಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಹೌದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ರಣವೀರ್ ಸಿಂಗ್ ಇದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
6/ 9
ಇನ್ನು ರಣವೀರ್ ಸಿಂಗ್ ಅವರು ಎಂದಿನಂತೆ ತಮ್ಮ ಹೊಸ ಫಂಕಿ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದರು. ಥೇಟ್ ಸ್ಯಾಂಡಲ್ವುಡ್ನ ಉಪ್ಪಿಯ ಲುಕ್ನಲ್ಲಿದ್ದರು. ರಣವೀರ್ ಸಿಂಗ್ ಅವರ ಈ ಚಿತ್ರಗಳು ಸದ್ಯ ವೈರಲ್ ಆಗುತ್ತಿವೆ.
7/ 9
ನಿರ್ದೇಶಕ ಶಂಕರ್ (Director Shankar) ಅವರ ಸಿನಿಮಾ ಎಂದ ಕೂಡಲೇ ಬಜೆಟ್ ಎಷ್ಟು ಎಂದು ಕೇಳುವಂತಾಗಿದೆ... ಹೌದು, ಇವರು ಒಂದು ಸಿನಿಮಾಗೆ ಖರ್ಚು ಮಾಡುವ ಹಣದಲ್ಲಿ ಸುಮಾರು ಹತ್ತು ಚಿತ್ರಗಳ ನಿರ್ಮಾಣ ಮಾಡಬಹುದು. ಅದಕ್ಕೆ ಬಿಗ್ ಬಜೆಟ್ (Big Budget Movies) ಸಿನಿಮಾಗಳಿಗೆ ಶಂಕರ್ ಅವರು ಹೆಸರುವಾಸಿಯಾಗಿದ್ದಾರೆ.
8/ 9
5 ವರ್ಷಗಳ ಹಿಂದೆ 2.0 ಸಿನಿಮಾಗಾಗಿ 400 ಕೋಟಿ ಖರ್ಚು ಮಾಡಿದ್ದರು ಶಂಕರ್. ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ.
9/ 9
ದಿಲ್ ರಾಜು ಅವರ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ದಿಲ್ ರಾಜು ನಿರ್ಮಿಸುತ್ತಿರುವ 50ನೇ ಸಿನಿಮಾ ಇದಾಗಿದೆ. ಅಲ್ಲು ಅರ್ಜುನ್ ಅಭಿನಯದ ಡಿಜೆ ಸಿನಿಮಾ ದಿಲ್ ರಾಜು ನಿರ್ಮಿಸಿದ್ದ 25ನೇ ಚಿತ್ರವಾಗಿತ್ತು.