Vijay Antony: ತಮಿಳು ನಟ ವಿಜಯ್ಗೆ ಶೂಟಿಂಗ್ ಸೆಟ್ನಲ್ಲಿ ಗಾಯ
Vijay Antony: ನಟ ವಿಜಯ್ ಆಂಟೊನಿ ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಸಕ್ರಿಯರಾಗಿರುವ ನಟ. ಬಿಚ್ಚಗಾಡು ಸಿನಿಮಾದ ಮೂಲಕ ವಿಜಯ್ ಆಂಟೋನಿ ತೆಲುಗಿನಲ್ಲಿ ಒಳ್ಳೆಯ ಕ್ರೇಜ್ ಗಳಿಸಿದ್ದರು. ಸದ್ಯ ಇದರ ಸೀಕ್ವೆಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಳೆ ವಿಜಯ್ ಆಂಟೋನಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಚ್ಚಗಾಡು ಚಿತ್ರದ ಮೂಲಕ ತೆಲುಗಿನಲ್ಲಿ ಜನಪ್ರಿಯರಾದ ನಟ ವಿಜಯ್ ಆಂಟನಿ. ಸಿನಿಮಾದ ಶೂಟಿಂಗ್ ವೇಳೆ ವಿಜಯ್ ಆಂಟೋನಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
2/ 7
ಸದ್ಯ ಚಿತ್ರದ ಚಿತ್ರೀಕರಣ ಮಲೇಷ್ಯಾದಲ್ಲಿ ನಡೆಯುತ್ತಿದೆ. ಅಲ್ಲಿ ಶೂಟಿಂಗ್ ವೇಳೆ ವಿಜಯ್ ಆಂಟನಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರತಂಡ ಅವರನ್ನು ಮಲೇಷ್ಯಾದ ಆಸ್ಪತ್ರೆಗೆ ಸ್ಥಳಾಂತರಿಸಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
3/ 7
ದೋಣಿಯಲ್ಲಿ ದೃಶ್ಯವನ್ನು ಚಿತ್ರೀಕರಿಸುವಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ವೇಗವಾಗಿ ಬಂದ ದೋಣಿಯೊಂದು ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ಗಾಯಗೊಂಡಿದ್ದಾರಂತೆ.
4/ 7
ಆದರೆ ವಿಜಯ್ ಆರೋಗ್ಯ ಸ್ಥಿರವಾಗಿದೆಯಂತೆ. ಈ ಘಟನೆಯಿಂದ ವಿಜಯ್ ಆಂಟನಿ ಕುಟುಂಬ ಬೆಚ್ಚಿಬಿದ್ದಿದೆ. ಮೇಲಾಗಿ ಅವರ ಕುಟುಂಬ ಮಲೇಷ್ಯಾಕ್ಕೆ ತೆರಳಿದೆಯಂತೆ.
5/ 7
ಈ ಚಿತ್ರ ತಮಿಳಿನಲ್ಲಿ ಪಿಚ್ಚೈಕಾರನ್ 2 ಮತ್ತು ತೆಲುಗಿನಲ್ಲಿ ಬಿಚ್ಚಗಾಡು ಎಂದು ಬಿಡುಗಡೆಯಾಗಲಿದೆ. ಇದು ಕನ್ನಡದಲ್ಲಿ ಭಿಕ್ಷುಕ-2 ಮತ್ತು ಮಲಯಾಳಂನಲ್ಲಿ ಪಿಚ್ಚಕಾರನ್-2 ಆಗಿ ಬಿಡುಗಡೆಯಾಗಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರಮಂದಿರಗಳಲ್ಲಿ ಸಿನಿಮಾ ಸಮ್ಮರ್ನಲ್ಲಿ ರಿಲೀಸ್ ಆಗಲಿದೆ.
6/ 7
ಚಿತ್ರ 2023 ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ ಎಂದು ವಿಜಯ್ ಸೊಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್ಗಳನ್ನೂ ಬಿಡುಗಡೆ ಮಾಡಲಾಗಿದೆ.
7/ 7
ಈ ಪೋಸ್ಟರ್ ನಲ್ಲಿ ವಿಜಯ್ ಆಂಟನಿ ಕಣ್ಣಿಗೆ ಕೆಂಪು ಬಟ್ಟೆ ಕಟ್ಟಿಕೊಂಡಿದ್ದಾರೆ. ಅದರ ಮೇಲೆ ಆ್ಯಂಟಿ ಬಿಕಿಲಿ ಎಂದು ಬರೆಯಲಾಗಿದೆ. ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.