RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

RRR ಲೆಜೆಂಡರಿ ನಿರ್ದೇಶಕ ರಾಜಮೌಳಿ ನಿರ್ದೇಶನದ ಇತ್ತೀಚಿನ ಚಿತ್ರ. ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಭಾರೀ ಕ್ರೇಜ್ ಆಯಿತು. ಕಲೆಕ್ಷನ್‌ನಲ್ಲಿ ದಾಖಲೆಗಳನ್ನು ಮುರಿಯುವುದು ಮಾತ್ರವಲ್ಲದೆ ಹಲವು ಅವಾರ್ಡ್ಸ್​ ಪಡೆದುಕೊಳ್ಳುತ್ತಿದ್ದಾರೆ. ಈ ಚಿತ್ರವು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಸಿನಿಮಾದ ಬಗ್ಗೆ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ್ ಮಾಡಿರುವ ಕೆಲವು ಕಮೆಂಟ್ಸ್ ವೈರಲ್ ಆಗಿದೆ.

First published:

  • 110

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ನಿರ್ದೇಶಕ ಹಾಗೂ ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ ಅವರು ಕೊಟ್ಟಿರುವ ಕೆಲವು ಹೇಳಿಕೆಗಳು ವೈರಲ್ ಆಗಿವೆ. ಆಸ್ಕರ್ ರೇಸ್​ ಅಭಿಯಾನಕ್ಕೆ 'RRR' ತಂಡ 80 ಕೋಟಿಗೂ ಹೆಚ್ಚು ಖರ್ಚು ಮಾಡಿದೆ ಎಂದ ಅವರು ಆ ಹಣದಲ್ಲಿ 8 ಸಿನಿಮಾಗಳನ್ನು ಮಾಡಬಹುದು ಎಂದಿದ್ದಾರೆ. ಅವರ ಕಮೆಂಟ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

    MORE
    GALLERIES

  • 210

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ಈ ಕಮೆಂಟ್‌ಗಳಿಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಪ್ರೆಸ್ ಮೀಟ್ ಮಾಡೋ ಬದಲು ಸಿನಿಮಾ ಮಾಡ್ತೀವಿ ಅಂತಾರೆ. ಹತ್ತು ವರ್ಷಗಳಿಂದ ಸಿನಿಮಾ ಮಾಡದ ನಿರ್ದೇಶಕರನ್ನು ಮಾಜಿ ಡೈರೆಕ್ಟರ್ ಎಂದು ಕರೆಯುತ್ತಿದ್ದಾರೆ ಎಂದು ತಮ್ಮಾರೆಡ್ಡಿ ಅವರನ್ನು ವ್ಯಂಗ್ಯ ಮಾಡಿದ್ದಾರೆ.

    MORE
    GALLERIES

  • 310

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ರಾಜಮೌಳಿ ಏನೇ ಮಾಡಿದರೂ ಅದಕ್ಕೊಂದು ಅರ್ಥವಿದೆ. ಈಗ 80 ಕೋಟಿ ನೋಡುತ್ತಿದ್ದೀರಿ. ಆದರೆ ಸದ್ಯದಲ್ಲೇ ದೊಡ್ಡ ಮಾರುಕಟ್ಟೆ ತೆರೆದುಕೊಳ್ಳಲಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ತೆಲುಗು ಚಿತ್ರವೊಂದು ಜಗತ್ತಿನಾದ್ಯಂತ ಇಷ್ಟೊಂದು ಜನಪ್ರಿಯವಾಗುತ್ತಿದೆ. ಮನ್ನಣೆ ಸಿಕ್ಕಿದ್ದಕ್ಕೆ ಖುಷಿ ಪಡಬೇಕು. ಈ ಟೀಕೆಗಳ ಅರ್ಥವೇನು ಎಂದಿದ್ದಾರೆ. ಅದೇನೇ ಇರಲಿ ತಮ್ಮಾರೆಡ್ಡಿ ಭಾರದ್ವಾಜ್ ಅವರ ಕಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 410

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    RRR ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ ಪ್ರತಿಷ್ಠಿತ ಚಿತ್ರವಾಗಿದ್ದು, ಯಂಗ್ ಟೈಗರ್ ಎನ್‌ಟಿಆರ್ ಮತ್ತು ಮೆಗಾಪವರ್ ಸ್ಟಾರ್ ರಾಮ್ ಚರಣ್ ನಟಿಸಿದ್ದಾರೆ. ಡಿವಿವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ದಾನಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    MORE
    GALLERIES

  • 510

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಚಲನಚಿತ್ರವು ಮಾರ್ಚ್ 25, 2022 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಸಿನಿಮಾ ಪ್ರಪಂಚದಾದ್ಯಂತ ಅನೇಕ ಪ್ರಸಿದ್ಧ ಪ್ರಶಸ್ತಿಗಳನ್ನು ಸಹ ಗೆದ್ದಿದೆ. ಆರ್‌ಆರ್‌ಆರ್ ಚಿತ್ರವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ಪಡೆಯುತ್ತಿದೆ. ಮೇಲಾಗಿ ಈ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ.

    MORE
    GALLERIES

  • 610

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ಸಿನಿಮಾದ ನಾಟು ನಾಟು ಹಾಡು ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ನಾಟು ನಾಟು ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಸಾಹಿತ್ಯ ನೀಡಿದ ಚಂದ್ರಬೋಸ್ ಅವರ ಹೆಸರನ್ನು ಅಕಾಡೆಮಿ ತಂಡ ಪ್ರಕಟಿಸಿದೆ.

    MORE
    GALLERIES

  • 710

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    RRR ಈಗ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ನಾಮನಿರ್ದೇಶನಗೊಂಡ ದಕ್ಷಿಣ ಭಾರತದ ಮೊದಲ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಮದರ್ ಇಂಡಿಯಾ (1957), ಸಲಾಮ್ ಬಾಂಬೆ (1988) ಮತ್ತು ಲಗಾನ್ (2001) ಆಸ್ಕರ್ ನಾಮನಿರ್ದೇಶನ ಹೊಂದಿರುವ ಇತರ ಭಾರತೀಯ ಚಲನಚಿತ್ರಗಳು.

    MORE
    GALLERIES

  • 810

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ಆರ್‌ಆರ್‌ಆರ್ ಕಲೆಕ್ಷನ್ ವಿಚಾರಕ್ಕೆ ಬಂದರೆ ತೆಲುಗು ಜೊತೆಗೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ವಿಶ್ವಾದ್ಯಂತ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ. ಕೀರವಾಣಿ ಸಂಗೀತ ನೀಡಿದರೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿದೆ.

    MORE
    GALLERIES

  • 910

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ಭಾರತದಲ್ಲಿ ಥಿಯೇಟ್ರಿಕಲ್ ರನ್ ನಂತರ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್ (ಹಿಂದಿ), G5 (ತೆಲುಗು, ತಮಿಳು, ಕನ್ನಡ, ಮಲಯಾಳಂ) ನಲ್ಲಿ ಸ್ಟ್ರೀಮ್ ಆಗುತ್ತಿದೆ. ನೆಟ್‌ಫ್ಲಿಕ್ಸ್‌ನಿಂದಾಗಿ ಪಾಶ್ಚಾತ್ಯ ಪ್ರೇಕ್ಷಕರನ್ನು ಮೆಚ್ಚಿಸುತ್ತಿರುವ ಈ ಚಿತ್ರ ಈಗಲೂ ಸಕ್ಸಸ್​ಫುಲ್ ಆಗಿ ರನ್ ಆಗುತ್ತಿದೆ.

    MORE
    GALLERIES

  • 1010

    RRR ಆಸ್ಕರ್ ಖರ್ಚಿನಲ್ಲಿ 8 ಸಿನಿಮಾ ಮಾಡ್ಬಹುದು! ಹಿರಿಯ ನಿರ್ದೇಶಕ ಟಾಂಗ್

    ಈ ಚಿತ್ರದಲ್ಲಿ ಜೂನಿಯರ್ NTR ಮತ್ತು ರಾಮ್ ಚರಣ್ ತೆಲುಗು ಐತಿಹಾಸಿಕ ನಾಯಕರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಂಗ್ಲಿಷ್ ನಟಿ ಒಲಿವಿಯಾ ಮೋರಿಸ್ ಮತ್ತು ಹಿಂದಿ ನಟಿ ಆಲಿಯಾ ಭಟ್ ಕೂಡಾ ನಟಿಸಿದ್ದಾರೆ. ಕಥೆಗೆ ತಿರುವು ನೀಡುವ ಪ್ರಮುಖ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ.

    MORE
    GALLERIES